ಯಲ್ಲಾಪುರ: `ರಾಜ್ಯ ಸಚಿವ ಸಂಪುಟ ಕೈಗೊಂಡ ಎರಡು ನಿರ್ಣಯಗಳು ರಾಜ್ಯಕ್ಕೆ ಮಾರಕ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ದೂರಿದರು. `ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಕರ್ನಾಟಕದಲ್ಲಿ ಒಂದುವರೆ ವರ್ಷದಿಂದ ಸೃಜ್ಜನ ಪಕ್ಷಪಾತ, ದುರಾಡಳಿತ ಹಾಗೂ ಭ್ರಷ್ಟಾಚಾರ ಆಡಳಿತ ನಡೆಯುತ್ತಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರದಲ್ಲಿ ಸಾಧನೆಯಾಗಿದೆ’ ಎಂದರು.
`ರಾಜ್ಯದಲ್ಲಿ ವಾಲ್ಮಿಕಿ ಹಾಗೂ ಮೂಡಾ ಹಗರಣ 4ರಿಂದ 5 ಸಾವಿರ ಕೋಟಿಯದ್ದಾಗಿದ್ದು, ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಸಿಬಿಐ ತನಿಖೆಗೂ ಸಚಿವ ಸಂಪುಟದ ಒಪ್ಪಿಗೆ ಪಡೆಯುವಂತೆ ನಿರ್ಣಯ ಕೈಗೊಂಡಿದ್ದಾರೆ. ಇದರೊಂದಿಗೆ 500 ಕೋಟಿ ರೂ ಹಗರಣವಿದೆ. ಅದು ಹೊರಬಾರದಂತೆ ತಡೆಯಲು ಸಿದ್ದರಾಮಯ್ಯ ತನಿಖಾ ಸಂಸ್ಥೆಗಳ ಅಧಿಕಾರ ಕಿತ್ತುಕೊಂಡಿದ್ದಾರೆ. ಸಿದ್ದರಾಮಯ್ಯ ಮೊದಲು ಮುಖ್ಯಮಂತ್ರಿ ಆದಾಗ ಲೋಕಾಯುಕ್ತ ತೆಗೆದು ಎಸಿಬಿ ರಚಿಸಿದ್ದರು. ಇದೀಗ ಸಿಬಿಐ ಸಹ ಸರ್ಕಾರದ ಅನುಮತಿ ಇಲ್ಲದೇ ತನಿಖೆ ಮಾಡುವ ಹಾಗಿಲ್ಲ ಎಂದು ಸಚಿವ ಸಂಪೂಟದ ನಿರ್ಣಯ ಕೈಗೊಂಡಿದ್ದಾರೆ’ ಎಂದು ದೂರಿದರು.
`ಕೇಂದ್ರ ಹಾಗೂ ರಾಜ್ಯದ ಸಂಬoಧ ಉತ್ತಮವಾಗಿರಲು ರಾಜ್ಯಪಾಲರ ನಡುವೆ ಸರ್ಕಾರದ ಪತ್ರ ವ್ಯವಹಾರವಿತ್ತು. ಆದರೆ, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯಪಾಲರ ನಡುವೆ ನೇರ ಪತ್ರ ವ್ಯವಹಾರ ನಡೆಯಬಾರದು ಎಂದು ಸಹ ಸಚಿವ ಸಂಪೂಟ ನಿರ್ಣಯಿಸಿದೆ. ಸಚಿವ ಸಂಪೂಟದ ಗಮನಕ್ಕೆ ತಂದು ಪತ್ರ ಬರೆಯಬೇಕು ಎಂಬ ನಿರ್ಣಯ ಜನಾಶಯಕ್ಕೆ ವಿರುದ್ಧವಾದದ್ದು’ ಎಂದು ಹೇಳಿದರು. `ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದೆಲ್ಲವೂ ಸುಳ್ಳಾಗಿದೆ’ ಎಂದರು. `ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ. ಸಿದ್ದರಾಮಯ್ಯ ರಾಜೀನಾಮೆ ನಂತರ 9 ಜನ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಿದ್ದು, ಅವರು ಸಹ ಕೋಟಿ ಕೋಟಿ ಹಗರಣಗಳ ಪಾಲುದಾರರಾಗಿದ್ದಾರೆ’ ಎಂದು ದೂರಿದರು.
ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿ ಪ್ರಮುಖರಾದ ಉಮೇಶ ಭಾಗ್ವತ, ಗಣಪತಿ ಮಾನಿಗದ್ದೆ, ಕೆ ಟಿ ಹೆಗಡೆ ಇತರರು ಇದ್ದರು.