ಅಂಕೋಲಾ: ಅಂಕೋಲಾದ ಕುಂಬಾರಕೇರಿಯಲ್ಲಿ ಕರ್ನಾಟಕ ರಣಧೀರರ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ ಆರ್ ಶಂಕರ್ ಗೌಡ ಅವರು ಭಾನುವಾರ ಅಂಕೋಲೆಗೆ ಆಗಮಿಸಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.
ರಣಧೀರರ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಸೂರಜ್ ಪಾಂಡುರoಗ ನಾಯ್ಕ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಕಿರಣ ಚಂದ್ರಹಾಸ ಗಾಂವಕರ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಸುಪ್ರಿಯಾ ವಿಷ್ಣು ನಾಯ್ಕ ಅವರನ್ನು ನೇಮಿಸಲಾಗಿದೆ.
ಕನ್ನಡಿಗರ ಉದ್ಯೋಗಕ್ಕೆ ಹಕ್ಕೊತ್ತಾಯ
ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆ ರಾಜ್ಯಾಧ್ಯಕ್ಷ ಕೆ ಆರ್ ಶಂಕರ್ ಗೌಡ `ಕೇಂದ್ರ ಹಾಗೂ ರಾಜ್ಯ ಸರ್ಕಾರ ತಮ್ಮ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಭಾಷಾ ತಾರತಮ್ಯ ನೀತಿಯನ್ನು ಬಿಡಬೇಕು’ ಎಂದು ಆಗ್ರಹಿಸಿದರು. `ಜನ ಸಾಮಾನ್ಯರು ಎಲ್ಲಾ ಕಡೆ ತೆರಿಗೆ ಪಾವತಿ ಮಾಡುತ್ತಾರೆ. ಹೀಗಿರುವಾಗ ರಸ್ತೆ ಟೋಲ್ ಮೂಲಕ ಸುಲಿಗೆ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೂರಜ ನಾಯಕ ಮಾತನಾಡಿ `ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಸಂಘಟನೆ ಮಾಡಲಾಗುವುದು. ಬಡವರ ಧ್ವನಿಯಾಗಿ ಈ ಸಂಘಟನೆ ಕಲಸ ಮಾಡಲಿದೆ’ ಎಂದರು. ಕರ್ನಾಟಕ ರಣಧೀರರ ವೇದಿಕೆಯ ರಾಜ್ಯ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಭೈರವ, ಪ್ರಧಾನ ಕಾರ್ಯದರ್ಶಿ ಮಹೇಶ್ ಜಿ ಗೌಡ, ಕರಾವಳಿ ಕರ್ನಾಟಕ ಅಧ್ಯಕ್ಷ ಕುಮಾಸರ್ ನಾಯ್ಕ, ನೆಲಮಂಗಲ ತಾಲೂಕು ಘಟಕದ ಅಧ್ಯಕ್ಷ ಮೂರ್ತಿ, ಕೊರಟಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುಸ್ವಾಮಿ ಎಂ ಎನ್, ನೆಲಮಂಗಲ ಜಂಟಿ ಕಾರ್ಯದರ್ಶಿ ರಮೇಶ್, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಮಿತಿ ಸದಸ್ಯರಾದ ಐಶ್ವರ್ಯ, ವಿವೇಕ್ , ಹರೀಶ್, ರಘುನಾಥ್, ದಿಲೀಪ್, ಮಹೇಶ್, ಸುಭಾಶ, ಉದಯ ರವಿ ಇದ್ದರು.