ಯಲ್ಲಾಪುರ: `ಅವೈಜ್ಞಾನಿಕ ಕಸ್ತೂರಿ ರಂಗನ ವರದಿ ಬಗ್ಗೆ ರಾಜ್ಯದ ಎಲ್ಲಡೆ ವಿರೋಧವಿದ್ದು, ಕೇಂದ್ರ ಸರ್ಕಾರದ ಮೇಲೆಯೂ ರಾಜ್ಯ ಸರ್ಕಾರಗಳ ಒತ್ತಡವಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು `ಈ ವರದಿ ಜಾರಿಯಾದರೆ ಮಲೆನಾಡು ಮತ್ತು ಕರಾವಳಿ ಭಾಗದ ಜನ ಜೀವನದ ಮೇಲೆ ತೀವ್ರ ತರದ ಪರಿಣಾಮ ಬೀರುತ್ತದೆ. ಈ ಹಿನ್ನಲೆಯಲ್ಲಿ ತೀವ್ರ ತರದ ಹೋರಾಟ ರಾಜ್ಯದ್ಯಂತ ನಡೆದಿದೆ’ ಎಂದರು.
ತಾಲೂಕಾ ಅಧ್ಯಕ್ಷ ಭೀಮಶಿ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಭಾಸ್ಕರ ಗೌಡ, ಸುಬ್ಬ ಭಟ್ಟ, ರಾಘವೇಂದ್ರ ಕುಣಬಿ, ಮಾಚನ ಭಟ್ಟ್, ಗೋಪಾಲ ಗೌಡ, ಶೇಕರ್ ನಾಯ್ಕ, ಮುಂತಾದವರು ಮಾತನಾಡಿದರು. ಜಿ.ವಿ ಭಟ್ಟ್, ದಿವಾಕರ ಮರಾಠಿ, ಚಂದ್ರು ಪೂಜಾರಿ, ಅನಂತ ಸಿದ್ದಿ, ಅನಂತ ಗೌಡ ಉಪಸ್ಥಿತರಿದ್ದರು.