ಶಿರಸಿ: ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಈ ಬಗ್ಗೆ ಆಸಕ್ತಿವಹಿಸಿದ್ದು, ಈ ಠಾಣಾ ಸಿಬ್ಬಂದಿ ವಾಹನ ಸಂಚಾರ ನಿಯಂತ್ರಣದ ಜೊತೆ ಪಾರ್ಕಿಂಗ್ ವ್ಯವಸ್ಥೆ ಬಗ್ಗೆಯೂ ನಿಗಾ ವಹಿಸಲಿದ್ದಾರೆ.
ಡಿವೈಎಸ್ಪಿ ಗಣೇಶ ಕೆ ಎಲ್, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ನಾಗಪ್ಪ ಬಿ ಹಾಗೂ ರತ್ನಾ ಕುರಿ ನಗರದಲ್ಲಿ ಪೊಲೀಸ್ ಠಾಣೆಗಾಗಿ ಜಾಗ ಪರಿಶೀಲನೆ ನಡೆಸಿದ್ದಾರೆ. ಕೂಡಾ ಪರಿಶೀಲಿಸಿ ಬಂದಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಮ್ಮತಿ ಸೂಚಿಸಿದ್ದು, ಟ್ರಾಫಿಕ್ ಠಾಣೆ ಅಗತ್ಯದ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಸಹ ಕೆಡಿಪಿ ಸಭೆಯಲ್ಲಿ ಒತ್ತಡ ಹಾಕಿದ್ದರು. ಈ ಎಲ್ಲಾ ಹಿನ್ನಲೆ ಇನ್ನೊಂದು ಠಾಣೆ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ.