ಕುಮಟಾದ ಹಗಲೆ ಕ್ರಾಸಿನಲ್ಲಿ ಮೂರು ತಿಂಗಳ ಹಿಂದೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬoಧಿಸಿ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ.
ಹೊನ್ನಾವರದ ಚಂದಾವರ ಬಳಿಯ ಚಿಕನ್ ವ್ಯಾಪಾರಿ ಫೈಸಲ್ ಖಾನ್ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ಈ ಹಿನ್ನಲೆ ನ್ಯಾಯಾಲಯ 8 ಜನರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಹಳಕಾರಿನಲ್ಲಿ ನಡೆದ ಜಗಳದ ವಿಷಯವಾಗಿ ಫೈಸಲ್ ಖಾನ್ ಹಾಗೂ ಇನ್ನಿತರರ ನಡುವೆ ದ್ವೇಷವಿತ್ತು. 2024ರ ನವೆಂಬರ್ 11ರಂದು ಫೈಸಲ್ ಖಾನ್ ಹಗಲೆ ಕ್ರಾಸಿನಲ್ಲಿ ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಹೋದಾಗ ಎಂಟು ಜನ ದಾಳಿ ನಡೆಸಿದ್ದರು. ಹೀಗಾಗಿ ಹಳಕಾರಿನ ಚಾಲಕ ಸಜ್ಜಾದ್ ಬೇಗ್, ಅದೇ ಊರಿನ ಅಜಬನ್ ಖಾನ್, ರಫಿಕ್ ಮುಲ್ಲಾ, ಅಲ್ತಾಪ ಹುಸೇನ್, ಅಖೀಲ ಖಾಜಿ, ಆಸೀಫ್ ಖಾಜಿ, ನಿಹಾಲ್ ವಿರುದ್ಧ ಅದೇ ದಿನ ಫೈಸಲ್ ಖಾನ್ ಪೊಲೀಸ್ ದೂರು ನೀಡಿದ್ದರು.
ಪೊಲೀಸರು ಎದುರುದಾರರನ್ನು ಕರೆಯಿಸಿ ವಿಚಾರಣೆ ನಡೆಸಿದ್ದರು. ಅದಾಗಿಯೂ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದ ಫೈಸಲ್ ಖಾನ್ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.