ಅನುಭವ ಟೂರಿಸ್ಟ್ ಮೂಲಕ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ರೆಸಾರ್ಟಿನಲ್ಲಿ ತಂಗಿದ್ದ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದು, ಶಿರಸಿ ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೇ ಸಾವನಪ್ಪಿದ್ದಾರೆ.
ಮಹಾರಾಷ್ಟದ ಪ್ರದೀಪ ಪ್ರಧಾನ ಎಂಬ 70 ವರ್ಷದ ವೃದ್ಧರಿಗೆ ಎರಡು ಬಾರಿ ಹೃದಯ ಸಮಸ್ಯೆ ಉಂಟಾಗಿತ್ತು. ಎಂಜಿಯೋಗ್ರಾಫಿ ಮಾಡಿಸಿ ಎರಡು ಸ್ಟಂಟ್ ಸಹ ಅಳವಡಿಸಲಾಗಿತ್ತು. ಅದಾಗಿಯೂ ಅವರು ಆಸಕ್ತಿಯಿಂದ ಕರ್ನಾಟಕ ಪ್ರವಾಸಕ್ಕೆ ಮನಸ್ಸು ಮಾಡಿದ್ದರು. ಅನುಭವ ಟೂರಿಸ್ಟ್’ನವರು ಅವರನ್ನು ಜವಾಬ್ದಾರಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಕರೆ ತಂದಿದ್ದರು. ಫೆ 8ರಂದು ಅವರು ಮಹಾರಾಷ್ಟçದಿಂದ ಹೊರಟಿದ್ದರು. ಪತ್ನಿ ಸುಲಭಾ ಪ್ರಧಾನ ಸಹ ಅವರ ಜೊತೆಯಿದ್ದರು.
ಗ್ರೀನ್ ವರ್ಡ ರೆಸಾರ್ಟಿನಲ್ಲಿ ಪ್ರದೀಪ ಪ್ರಧಾನ ವಸತಿ ಹೂಡಿದ್ದರು. ಫೆ 14ರಂದು ಕಫ ಹಾಗೂ ಕೆಮ್ಮು ಹೆಚ್ಚಾಗಿದ್ದರಿಂದ ಅವರನ್ನು ಟಿ ಎಸ್ ಎಸ್ ಆಸ್ಪತ್ರೆಗೆ ಕರೆತರಲಾಯಿತು. `ತನಗೆ ಏನು ಆಗಿಲ್ಲ’ ಎನ್ನುತ್ತ ಅವರೇ ಕಾರಿನಿಂದ ಇಳಿದು ವಿಲ್ ಚೇರ್ ಮೇಲೆ ಕೂತಿದ್ದರು. ಆದರೆ, ಫೆ 15ರಂದು ಅವರು ಸಾವನಪ್ಪಿದ ಬಗ್ಗೆ ಅಲ್ಲಿನ ವೈದ್ಯರು ತಿಳಿಸಿದರು. ಹೃದಯಘಾತದಿಂದ ಅವರು ಸಾವನಪ್ಪಿದ ಬಗ್ಗೆ ಅವರ ಪತ್ನಿ ಸುಲಭಾ ಪೊಲೀಸರಿಗೆ ಮಾಹಿತಿ ನೀಡಿ, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.