ದಾಂಡೇಲಿ: ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಕಟ್ಟಿದ್ದ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿದ ಪೊಲೀಸರು 22 ಜಾನುವಾರುಗಳಿಗೆ ಬದುಕುವ ಹಕ್ಕು ನೀಡಿದ್ದಾರೆ.
ದಾಂಡೇಲಿ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಬಳಿ ಜಾನುವಾರು ವಧೆ ನಡೆಯುವ ಸಾಧ್ಯತೆಗಳಿರುವ ಬಗ್ಗೆ ಹಿಂದೂಪರ ಸಂಘಟನೆಗಳು ಜಾನುವಾರುಗಳಿಗೆ ಹಿಂಸೆ ನೀಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಂಡಸಹಿತ ಅಲ್ಲಿ ತೆರಳಿದರು. ಆಗ ಅನಧಿಕೃತವಾಗಿ ಗೋವುಗಳನ್ನು ಹಾಗೂ ಸಣ್ಣ ಕರುಗಳನ್ನು ಅಲ್ಲಿ ಬಂಧಿಸಿಡಲಾಗಿತ್ತು. ಸ್ಥಳದಲ್ಲಿ ಜಮಾವಣೆಗೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಮಹ್ಮದ ಗೌಸ ಉಮರ ಕೊಟ್ಟಾನ್ ಹಾಗೂ ಉಮರ ಮಹ್ಮದ ಅಕ್ಬರ ಕೊಟ್ಟಾನ್ ಅವರ ಬಳಿ ಉತ್ತರ ಇರಲಿಲ್ಲ. ಹೀಗಾಗಿ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದು, ಒಟ್ಟು 5 ಕರುಗಳು ಹಳಿಯಾಳ ತಾಲೂಕಿನ ದುಸಗಿಯ ಗೋಶಾಲೆಗೆ ರವಾನಿಸಿದರು. ಒಂದು ಕೋಣ ಸೇರಿ 17 ಜಾನುವಾರಗಳ ಬಗ್ಗೆ ದಾಖಲೆ ನೀಡಲು ಶೆಡ್ ಮಾಲಕರಿಗೆ ಸೂಚಿಸಿದರು. ಸ್ಥಳದಲ್ಲಿ ಇನ್ನೂ ಬಿಗುವಿನ ವಾತಾವರಣ ಕಂಡು ಬಂದಿದೆ.
Discussion about this post