ಕಸ್ತೂರಿ ರಂಗನ್ ವರದಿ ವಿರೋಧ ಹಾಗೂ ಅರಣ್ಯವಾಸಿಗಳ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನ 21ರಂದು ಉತ್ತರ ಕನ್ನಡ ಜಿಲ್ಲೆಯ 10 ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ತೆರಳುತ್ತಿದ್ದಾರೆ.
ಪ್ರತಿಭಟನೆಗೆ ಎಲ್ಲಾ ಬಗೆಯ ತಯಾರಿ ನಡೆದಿದ್ದು, ಭವ್ಯವಾದ ವೇದಿಕೆ ಹಾಗೂ ಅಲ್ಲಿ ಅಳವಡಿಸಿದ ಖುರ್ಚಿಗಳು ಸ್ವಾಗತಕ್ಕೆ ಸಿದ್ಧವಾಗಿದೆ. ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಈಗಾಗಲೇ 8 ಸಾವಿರ ಖುರ್ಚಿಗಳನ್ನು ಹಾಕಲಾಗಿದೆ. ಶಾಮಿಯಾನಗಳನ್ನು ಅಳವಡಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಕೆಲವರು ಈಗಾಗಲೇ ರೈಲು ಹಿಡಿದಿದ್ದಾರೆ. ಹಲವರು ಬುಧವಾರ ರಾತ್ರಿ ಬಸ್ ಹತ್ತಲಿದ್ದಾರೆ.
ವಿವಿಧ ಜನಪ್ರತಿನಿಧಿಗಳು, ಕಾನೂನು ತಜ್ಞರ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಅರಣ್ಯವಾಸಿಗಳ ಸಮಸ್ಯೆ ಬಿಂಬಿಸುವ 6 ಪ್ರಮುಖ ಬೇಡಿಕೆಗಳನ್ನು ಈ ಹೋರಾಟದಲ್ಲಿ ಮಂಡಿಸಲಾಗುತ್ತದೆ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ.