ವಾಸದ ಮನೆ, ಕೆಲಸ ಮಾಡುವ ಕಚೇರಿ, ಊಟಕ್ಕೆ ಹೋಗುವ ಹೊಟೇಲು, ರೋಗಿಗಳ ಆರೈಕೆಗೆ ಮೀಸಲಿರುವ ಆಸ್ಪತ್ರೆ.. ಎಲ್ಲಾ ಕಡೆ ಕಟ್ಟಡದ ಹೊರ ಸೌಂದರ್ಯದ ಹಾಗೇ ಒಳ ವಿನ್ಯಾಸ ಸಹ ಗಮನ ಸೆಳೆಯುತ್ತದೆ. ದಿನ ನಿತ್ಯದ ಬಹುಪಾಲು ಸಮಯ ಕಳೆಯುವ ಕಟ್ಟಡಗಳಲ್ಲಿ ಮನಸ್ಸಿಗೆ ಮದ ನೀಡುವ ವಿನ್ಯಾಸಗಳಿರುವುದು ಅಷ್ಟೇ ಮುಖ್ಯ. ಹೀಗಾಗಿ ಎಲ್ಲಾ ಕಡೆ ಕಟ್ಟಡಗಳ ಒಳ ವಿನ್ಯಾಸದ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, `ABC ಅಲ್ಯುಮಿನಿಯಂ ಇಂಟೀರಿಯರ್’ ಸಹ ಈ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ಹೊಂದಿದೆ.
ಕೇರಳ ಮೂಲದ `ABC ಅಲ್ಯುಮಿನಿಯಂ ಇಂಟೀರಿಯರ್’ನವರು ಇದೀಗ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ತಮ್ಮ ಕ್ಷೇತ್ರ ವಿಸ್ತರಿಸಿದ್ದಾರೆ. ಇಲ್ಲಿನ ಹಲವು ಮನೆ, ಕಚೇರಿ ಹಾಗೂ ಇನ್ನಿತರ ಕಟ್ಟಡಗಳಿಗೆ ಅವರು ಅಚ್ಚುಕಟ್ಟಾದ ಒಳ ವಿನ್ಯಾಸವನ್ನು ಮಾಡಿಕೊಟ್ಟಿದ್ದಾರೆ. ತುಕ್ಕು ಬಾರದ ಉಪಕರಣಗಳನ್ನು ಬಳಸಿ ಗುಣಮಟ್ಟದ ಕೆಲಸ ಮಾಡಿಕೊಡುವಲ್ಲಿ ಎಬಿಸಿ ಅಲ್ಯುಮಿನಿಯಂ ವರ್ಕ ಸಿಬ್ಬಂದಿ ಪರಿಣಿತಿ ಪಡೆದಿದ್ದಾರೆ.
ಚಿಕ್ಕದಾದ ಮನೆಯನ್ನು ಸಹ ಚೊಕ್ಕದಾಗಿರಿಸಿಕೊಳ್ಳುವಲ್ಲಿ ಒಳ ವಿನ್ಯಾಸ ನೆರವಾಗುತ್ತದೆ. ಮನೆಯ ಸೌಂದರ್ಯ ಹೆಚ್ಚಿಸುವುದರ ಜೊತೆ ಅಲಂಕಾರಕ್ಕೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ. ಕಟ್ಟಡದ ಸಣ್ಣ ಸಣ್ಣ ಪ್ರದೇಶಗಳನ್ನು ಅಂದದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವವರಿಗೆ ಒಳ ವಿನ್ಯಾಸ ಅತಿ ಅಗತ್ಯ. ಇದೆಲ್ಲದರ ಜೊತೆ ಕಟ್ಟಡದ ಒಳ-ಹೊರ ವಾತಾವರಣ ಸುಂದರವಾಗಿದ್ದರೆ ಅಲ್ಲಿರುವವರ ಮನಸ್ಸು ನೆಮ್ಮದಿಯಿಂದಿರುತ್ತದೆ.

ಕಟ್ಟಡಗಳಿಗೆ ಬಳಸುವ ಬಣ್ಣ, ಸಾಮಗ್ರಿ, ಪೀಠೋಪಕರಣ, ನೆಲಹಾಸು, ಲೈಟಿಂಗ್ ಒಳ ವಿನ್ಯಾಸದ ಪ್ರಮುಖ ವಿಷಯಗಳು. ಮೊದಲು ಒಳ ವಿನ್ಯಾಸದ ಬಗ್ಗೆ ನಗರದ ಜನ ವಿಶೇಷ ಆಸಕ್ತಿವಹಿಸುತ್ತಿದ್ದು, ಇದೀಗ ಗ್ರಾಮೀಣ ಭಾಗದಲ್ಲಿ ಸಹ ವ್ಯಾಪಕ ಪ್ರಮಾಣದಲ್ಲಿ ಮನೆ ಅಲಂಕಾರಗಳಿಗೆ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಎಬಿಸಿ ಅಲ್ಯುಮಿನಿಯಂ ವರ್ಕಿನವರು ಗ್ರಾಮೀಣ ಭಾಗದ ಕಟ್ಟಡಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಸೇವೆ ಒದಗಿಸುತ್ತಿದ್ದಾರೆ.
ಮಧ್ಯಮ ವರ್ಗದ ಜನರ ಮನೆಯನ್ನು ಸಹ ಐಷಾರಾಮಿ ಮನೆಯ ಅನುಭೂತಿ ನೀಡುವಲ್ಲಿ ಒಳಾಂಗಣ ವಿನ್ಯಾಸ ಮಹತ್ವದ ಪಾತ್ರವಹಿಸಿದೆ. ಅತ್ಯಂತ ಹಳೆಯ ಮನೆಗಳನ್ನು ಸಹ ಒಳ ವಿನ್ಯಾಸ ಪದ್ಧತಿ ಅನುಸರಿಸಿ ಆಧುನಿಕ ಮನೆಯನ್ನಾಗಿ ಮಾಡುವ ಶಕ್ತಿ ಎಬಿಸಿ ಅಲ್ಯುಮಿನಿಯಂ ವರ್ಕ’ನ ಸಿಬ್ಬಂದಿಗಿದೆ.

ಕಡಿಮೆ ಹಣ ವೆಚ್ಚ ಮಾಡಿ ಐಷಾರಾಮಿ ಮನೆಯ ಅನುಭೂತಿ ಪಡೆಯಲು ಒಳ ವಿನ್ಯಾಸ ಅತ್ಯತ್ತಮ ಆಯ್ಕೆ. ಟಿವಿ ಯುನಿಟ್, ಅಡುಗೆಮನೆ, ಶೌಚಾಲಯ, ವಾಲ್ರೂಪ್, ಕೆಲವೇ ಕೆಲ ಕೊಠಡಿಗಳ ಒಳ ವಿನ್ಯಾಸ ಮಾಡಿಕೊಡಲು ಸಹ `ABC ಅಲ್ಯುಮಿನಿಯಂ ಇಂಟೀರಿಯರ್ ಸಿಬ್ಬಂದಿ ಸಿದ್ಧರಿದ್ದಾರೆ.
ನಿಮ್ಮ ಮನೆ-ಕಚೇರಿಯನ್ನು ಸಹ ಇನ್ನಷ್ಟು ಸುಂದರವಾಗಿಸಲು ಇಲ್ಲಿ ಫೋನ್ ಮಾಡಿ: 9481314420 ಅಥವಾ ಇಲ್ಲಿ ವಾಟ್ಸಪ್ ಮಾಡಿ: 6282592690
#Sponsored