ಹೊನ್ನಾವರ: ಕರ್ಕಿ ಮಠದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯಲ್ಲಿ ಜೇನು ಗೂಡು ಕಟ್ಟಿದೆ. ದುಷ್ಕರ್ಮಿಗಳು ಕಲ್ಲು ತೂರಿದಲ್ಲಿ ಮಕ್ಕಳ ಮೇಲೆ ಆಕ್ರಮಣ ಖಚಿತ. ಹೀಗಾಗಿ ಆ ಭಾಗದ ಪಾಲಕರು ಆತಂಕದಲ್ಲಿದ್ದಾರೆ.
`ಈಚೆಗೆ ಜೇನು ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಈ ಹಿನ್ನಲೆ ಶಾಲೆ ರಸ್ತೆಯಲ್ಲಿರುವ ಜೇನುಗೂಡು ತೆರವು ಮಾಡಿ ಅದನ್ನು ಬೇರೆ ಕಾಡಿಗೆ ಬಿಡಬೇಕು’ ಎಂದು ಅರಣ್ಯಾಧಿಕಾರಿಗಳಿಗೆ ಊರಿನವರು ಆಗ್ರಹಿಸಿದ್ದಾರೆ. ಆದರೆ, `ಜೇನು ಹುಳುಗಳು ಅನಗತ್ಯವಾಗಿ ಯಾರ ಮೇಲೆಯೂ ದಾಳಿ ಮಾಡುವುದಿಲ್ಲ’ ಎಂದು ಅಧಿಕಾರಿಗಳು ಸುಮ್ಮನಿದ್ದಾರೆ.
ಬಿಸಿಲು ಹೆಚ್ಚಾದಾಗ ಜೇನು ನೊಣಗಳ ಹಾರಾಟ ಕಂಡು ಜನ ಭಯಗೊಂಡಿದ್ದು, ರಸ್ತೆಯಲ್ಲಿ ಓಡಾಡುವವರು ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳ ಮೇಲೆ ಆಕ್ರಮಣ ನಡೆಸುವ ಮುನ್ನ ಅದನ್ನು ಸ್ಥಳಾಂತರಿಸಬೇಕು ಎಂದು ಅಲ್ಲಿನವರು ಒತ್ತಾಯಿಸಿದರು.