ಶಿರಸಿ: ಶಾಲಾ ವಿದ್ಯಾರ್ಥಿಗಳ ಮೇಲೆ ಜೇನು ಹುಳುಗಳ ದಾಳಿ ನಡೆಸಿದೆ.
ಶಿರಸಿ ನಗರದ ಡೊನಬಾಸ್ಕೊ ಶಾಲೆಯ ವಿದ್ಯಾರ್ಥಿಗಳು ಶಾಲೆ ಹಿಂದೆ ಆಟವಾಡುತ್ತಿದ್ದರು. ಆಗ ಏಕಾಏಕಿ ಜೇನು ಹುಳುಗಳು ಆಕ್ರಮಣ ನಡೆಸಿದವು. ತರಗತಿಯ ಒಳಗೆ ಸಹ ಜೇನು ಹುಳು ನುಗ್ಗಿ ಅಲ್ಲಿದ್ದವರ ಮೇಲೆಯೂ ಆಕ್ರಮಣ ನಡೆಸಿದವು. ಜೇನು ದಾಳಿಯಿಂದ ಶಾಲಾ ಮಕ್ಕಳು ತತ್ತರಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 3 ಗಂಟೆ ಅವಧಿಯಲ್ಲಿ ಜೇನು ಹುಳುಗಳು ಮಕ್ಕಳ ಮೇಲೆ ಆಕ್ರಮಣ ನಡೆಸಿದವು. 32 ವಿದ್ಯಾರ್ಥಿಗಳು ಹುಳ ಕಚ್ಚಿಸಿಕೊಂಡರು.
ಜೇನು ಹುಳುಗಳ ದಾಳಿಗೆ ಒಳಗಾದ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೇನು ಹುಳು ಕಚ್ಚಿದ ಕಡೆ ಕಂಡ ಸೂಚಿಗಳನ್ನು ತೆಗೆದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.