ಬೆಂಗಳೂರು-ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಭಟ್ಕಳದ ಶುರೈಮ್ (22) ಎಂಬಾತನನ್ನು ಮಣಿಪಾಲಿನ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ನೀಡಿದ ಫೋಟೋ ಆಧರಿಸಿ ಅಪರಾಧ ನಡೆದ 20 ಗಂಟೆಯೊಳಗೆ ಬಂಧಿಸಿದ್ದಾರೆ.
ಸoತ್ರಸ್ತೆ ಉಡುಪಿಯ ಗುಡ್ಡೆಯಂಗಡಿ ನಿವಾಸಿ. ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಆಕೆಗೆ ಕೆಲಸ. ಬಂಧಿತ ಆರೋಪಿ ಶುರೈಮ್ ಕಾಲೇಜು ವಿದ್ಯಾರ್ಥಿ. ಮೈಸೂರು ಜಮಾತ್ನಲ್ಲಿ 10 ದಿನಗಳ ಕೋರ್ಸ್ ಮುಗಿಸಿ ಹಿಂತಿರುಗುತ್ತಿದ್ದ. ಆಗಸ್ಟ್ 24ರಂದು ಬೆಂಗಳೂರಿನಿoದ ಮುರುಡೇಶ್ವರಕ್ಕೆ ಹೊರಡುವ ರೈಲು ಹತ್ತಿದ್ದ ಯುವತಿಗೆ ಆಗಸ್ಟ್ 25ರಂದು ರೈಲು ಮುಲ್ಕಿ ದಾಟುತ್ತಿರುವಾಗ ಶುರೈಮ್ ಕಾಣಿಸಿಕೊಂಡಿದ್ದ. ಅಲ್ಲಿಂದಲೇ ಪದೇ ಪದೇ ತೊಂದರೆ ಕೊಡಲು ಶುರು ಮಾಡಿದ್ದ. ಅದಾಗಿಯೂ ಸಹಿಸಿಕೊಂಡಿದ್ದ ಸಂತ್ರಸ್ತೆ ಉಡುಪಿ ರೈಲ್ವೆ ನಿಲ್ದಾಣ ತಲುಪಿದ ಬಳಿಕ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರು. ರೈಲ್ವೆ ಪೊಲೀಸರು ಪ್ರಕರಣವನ್ನು ಮಣಿಪಾಲ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮಣಿಪಾಲ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರು.
ತನಿಖೆ ಆರಂಭಿಸಿದ ಮಣಿಪಾಲ ಪೊಲೀಸರು ಅಂದು ಬೆಂಗಳೂರು – ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸಿದ 1200 ಜನರ ಪಟ್ಟಿಯನ್ನು ಪಡೆದು ಎಲ್ಲರಿಗೂ ಪೋನಾಯಿಸಿದ್ದರು. ಮುಖದ ಲಕ್ಷಣಗಳು ಮತ್ತು ಬಟ್ಟೆಯ ಆಧಾರದ ಮೇಲೆ ತಮ್ಮ ತನಿಖೆ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಸಿಸಿಟಿವಿಯಲ್ಲಿ ಆರೋಪಿಯ ಚಲನವಲನಗಳನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಆರೋಪಿ ಭಟ್ಕಳ ನಿವಾಸಿ ಎಂಬುದು ಪತ್ತೆಯಾಗಿದೆ. ಈ ವೇಳೆಗಾಗಲೇ ಸಂತ್ರಸ್ತೆ ಮೊಬೈಲಿನಲ್ಲಿ ಕ್ಲಿಕ್ಕಿಸಿದ ಫೋಟೋ ಪೊಲೀಸರ ನೆರವಿಗೆ ಬಂದಿದೆ.