1995ರಲ್ಲಿ ತೆರೆಕಂಡ ಅಂಬರೀಶ್ ಅಭಿನಯದ `ಬೇಟೆಗಾರ’ ಕನ್ನಡ ಸಿನಿಮಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ. ಪೊಲೀಸ್ ಅಧಿಕಾರಿಯೊಬ್ಬರ ಮುಂದೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿದ ಸನ್ನಿವೇಶ ಚಿತ್ರದಲ್ಲಿದೆ. ಚಿತ್ರಿಕರಣ ನಡೆದು 30 ವರ್ಷ ಕಳೆದರೂ ಈ ವಿಷಯ ಯಾರಿಗೂ ಗೊತ್ತಾಗಿಲ್ಲ!
ಉದಯ ಟಿವಿಯಲ್ಲಿ ಪ್ರಸಾರವಾದ ಚಿತ್ರ ನೋಡುತ್ತಿದ್ದ 16 ವರ್ಷದ ಬಾಲಕಿ ಮಾನ್ಯ ಸತೀಶ್ ನಾಯ್ಕ ಇದನ್ನು ಗುರುತಿಸಿದ್ದು, ಈವರೆಗೂ ಕಾನೂನು ಕ್ರಮ ಆಗದ ಬಗ್ಗೆ ತಂದೆಗೆ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ಪಾತ್ರದ ಮುಂದೆಯೇ ಈ ರೀತಿ ಕಾನೂನು ಉಲ್ಲಂಘನೆ ಆಗಿರುವ ಬಗ್ಗೆ ತಂದೆಯನ್ನು ಪ್ರಶ್ನಿಸಿದ್ದು, ಪ್ರಸ್ತುತ ಕಾರವಾರದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹಾಗೂ ಮುರುಡೇಶ್ವರದ ಸತೀಶ ನಾಯ್ಕ ಸೇರಿ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. `30 ವರ್ಷದ ಹಿಂದಿನ ಪ್ರಕರಣಕ್ಕೆ ಈಗ ಕ್ರಮ ಕೈಗೊಳ್ಳಲು ಆಗದೇ ಇದ್ದರೂ ಚಿತ್ರದಲ್ಲಿ ಬರುವ ಆ ಸನ್ನಿವೇಶವನ್ನು ತೆಗೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಎಟಿ ರಾಘು ಈ ಚಿತ್ರವನ್ನು ನಿರ್ದೇಶಿಸಿದ್ದರು. ಎಚ್ ಎನ್ ನಾಗಭೂಷಣ್ ಸಹಾಯಕ ನಿರ್ದೇಶಕರಾಗಿದ್ದರು. ಎಟಿಆರ್ ಫಿಲ್ಮ ಬ್ಯಾನರ್ ಅಡಿ ನಿರ್ಮಾಣವಾದ ಚಿತ್ರ ಇದಾಗಿದ್ದು, ಸಂಗೀತಕ್ಕೆ ಸಾಧು ಕೋಕಿಲ ಧ್ವನಿಯಾಗಿದ್ದರು.
ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿದ ಚಿತ್ರದ ತುಣುಕು ಇಲ್ಲಿ ನೋಡಿ..
Discussion about this post