ಭಟ್ಕಳ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ.
ಅನಪಾಲ ಸೂಪರ್ ಮಾರ್ಕೇಟಿನಲ್ಲಿ ಕೆಲಸ ಮಾಡುವ ತಿರುಮಲ ಮಂಜುನಾಥ ಮೊಗೇರ ಬೈಕ್ ಕಳೆದುಕೊಂಡವರು. ಹೆಬ್ಳೆಯ ಗೌಡನಮನೆ ಹರ್ತಾರಿನವರಾದ ತಿರುಮಲ ಅವರು ಅಕ್ಟೊಬರ್ 30ರಂದು ಬೆಳಗ್ಗೆ 8.20ಕ್ಕೆ ಬಸ್ ನಿಲ್ದಾಣದಲ್ಲಿ ತಮ್ಮ ಹಿರೋ ಸ್ಪಾಂಡರ್ ಬೈಕ್ ನಿಲ್ಲಿಸಿದ್ದರು. ರಾತ್ರಿ 10.30ಕ್ಕೆ ಅವರು ಬಸ್ ನಿಲ್ದಾಣಕ್ಕೆ ಮರಳಿ ಬಂದಾಗ ಬೈಕ್ ಇರಲಿಲ್ಲ.
ಪರಿಶೀಲನೆ ನಡೆಸಿದಾಗ ನಾಲ್ವರು ಆಗಮಿಸಿ ಬೈಕ್ ಅಪಹರಿಸಿರುವುದು ಅವರಿಗೆ ಖಚಿತವಾಗಿದೆ. 40 ಸಾವಿರ ರೂ ಮೌಲ್ಯದ ಬೈಕ್ ಕದ್ದವರನ್ನು ಪತ್ತೆ ಮಾಡುವಂತೆ ಅವರು ಪೊಲೀಸ್ ದೂರು ನೀಡಿದ್ದಾರೆ.