ಜೊಯಿಡಾ: ಬೈಕಿನಲ್ಲಿ ಚಲಿಸುತ್ತಿದ್ದ ದಂಪತಿಗೆ ಹಿಂದಿನಿ0ದ ಇನ್ನೊಂದು ಬೈಕ್ ಗುದ್ದಿದ ಪರಿಣಾಮ ದಂಪತಿ ಗಾಯಗೊಂಡಿದ್ದಾರೆ.
ರಾಮನಗರದ ಆಮಶೇತದಲ್ಲಿ ವಾಸವಾಗಿದ್ದ ರುಕ್ಮಣ್ಣ ಚವಾನ್ ಹಾಗೂ ತಮ್ಮ ಪತ್ನಿ ಶೀತಲ್ ಜೊತೆ ಡಿ 18ರ ಸಂಜೆ ಸಂತೆಗೆ ಹೊರಟಿದ್ದರು. ಮಿರಾಶಿಕುಂಬೆಲಿಯಿoದ ರಾಮನಗರಕ್ಕೆ ಬೈಕಿನಲ್ಲಿ ಬಂದ ಅವರಿಗೆ ರಾಮನಗರ ಬಸ್ ನಿಲ್ದಾಣದ ಬಳಿ ಸಂಜು ಗೌಳಿ ತಮ್ಮ ಬೈಕ್ ಗುದ್ದಿದರು.
ಸಂಜು ಗೌಳಿ ಹಿಂದಿನಿoದ ಬೈಕ್ ಗುದ್ದಿದ ರಭಸಕ್ಕೆ ರುಕ್ಮಣ್ಣ ಹಾಗೂ ಶೀತಲ್ ನೆಲಕ್ಕೆ ಬಿದ್ದು ಗಾಯಗೊಂಡರು. ರುಕ್ಮಣ್ಣ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಶೀತಲ್ ಅವರಿಗೂ ಗಾಯವಾಗಿದೆ. ಅಪಘಾತದ ಬಗ್ಗೆ ಅರಿತ ಶೀತಲ ಅವರ ತಂದೆ ಗುಂಡು ಚೌಹಾನ್ ಪೊಲೀಸ್ ದೂರು ನೀಡಿದ್ದಾರೆ.