ಯಲ್ಲಾಪುರದ ತಾಟವಾಳ ಬಳಿ ಜನವರಿ 2ರ ರಾತ್ರಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವಿನಾಯಕ ವಾಲಿ ಎರಡು ತಿಂಗಳ ನರಳಾಟದ ನಂತರ ಸಾವನಪ್ಪಿದ್ದಾರೆ.
ಬೆಳಗಾವಿಯ ಯಶವಂತ ಪರಸಪ್ಪನವರ್ ಎಂಬಾತರು ಜನವರಿ 2ರ ರಾತ್ರಿ ಹಳಿಯಾಳ ಕ್ರಾಸಿನಿಂದ ಬೆಳಗಾವಿ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ತಾಟವಾಳದ ಪಾಂಡುರoಗ ಹೊಟೇಲ್ ಎದುರು ಬೆಳಗಾವಿಯ ಹರೀಶ ಮೀಸಿ ಎಂಬಾತರು ಓಡಿಸುತ್ತಿದ್ದ ಬೈಕಿಗೆ ಅವರು ಗುದ್ದಿದರು. ಪರಿಣಾಮ ಹರೀಶ್ ಮೀಸಿ ಜೊತೆ ಬೈಕಿನಲ್ಲಿದ್ದ ವಿನಾಯಕ ವಾಲಿ ಗಂಭಿರ ಪ್ರಮಾಣದಲ್ಲಿ ಗಾಯಗೊಂಡರು.
ವಿನಾಯಕ ವಾಲಿ ಹಾಗೂ ಹರೀಶ ಮೀಸಿ ಎಂಬಾತರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಯಲ್ಲಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಪಡೆದ ನಂತರ ವಿನಾಯಕರನ್ನು ಹುಬ್ಬಳ್ಳಿ ಸುಜರಾಯು ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಮರುದಿನ ವಿನಾಯಕ ವಾಲಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆ ಸೇರಿದ್ದರು.
ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನಾಯಕ ವಾಲಿ ಮಾರ್ಚ 3ರ ರಾತ್ರಿ ಸಾವನಪ್ಪಿದರು. ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದ ಯಲ್ಲಾಪುರ ಪೊಲೀಸರು ಇದೀಗ ವಿನಾಯಕ ವಾಲಿ ಸಾವನಪ್ಪಿದ ಬಗ್ಗೆ ಪ್ರಕರಣದಲ್ಲಿ ನಮೂದಿಸಿದ್ದಾರೆ.