ಕಾರವಾರ: ಬಿಣಗಾದ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಪ್ಲಾಂಟ್ ಆಪರೇಟರ್ ಆಗಿದ್ದ ನಾಗರಾಜ ಅವರ್ಸೆಕರ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಗ್ರಾಸಿಮ್ ಇಂಡಸ್ಟ್ರಿಯಲ್ಲಿನ ಅನೀಲ ಸೋರಿಕೆಯಿಂದ ಅವರು ಸಾವನಪ್ಪಿದ ಶಂಕೆ ವ್ಯಕ್ತವಾಗಿದೆ.
ಕಾರವಾರದ ಬೈತಖೋಲ ಬಳಿ ವಾಸವಾಗಿದ್ದ ನಾಗರಾಜ ಅವರ್ಸೆಕರ್ ಡಿ 16ರ ಮಧ್ಯಾಹ್ನ ಬಿಣಗಾದ ಗ್ರಾಸಿಮ್ ಇಂಡಸ್ಟಿçಗೆ ಹೋಗಿದ್ದರು. 2ನೇ ಶಿಫ್ಟ್ ಅವಧಿಯ ಕೆಲಸಕ್ಕಾಗಿ ಅವರನ್ನು ನಿಯೋಜಿಸಲಾಗಿದ್ದು, ಸಹೋದ್ಯೋಗಿ ಪ್ರಮೋದಕುಮಾರ ತ್ರಿಪಾಠಿ ಹಾಗೂ ವಿಕಾಸ ಜುಗದರ್ ಜೊತೆ ಅವರು ಕೆಲಸ ಮಾಡುತ್ತಿದ್ದರು.
ರಾತ್ರಿ 9.15ಕ್ಕೆ ಆಕಸ್ಮಿಕವಾಗಿ ಅಲ್ಲಿ ಅನೀಲ ಸೋರಿಕೆಯಾಗಿದ್ದು, ಸೋರಿಕೆ ತಡೆಗೆ ಸ್ವಿಚ್ ಬಂದ್ ಮಾಡಲು ಅವರು ತೆರಳಿದ್ದರು. ಈ ವೇಳೆ ನಾಗರಾಜ ಅವರ್ಸೆಕರ್ ಕುಸಿದು ಬಿದ್ದು ಅಸ್ವಸ್ಥಗೊಂಡರು. ಅವರನ್ನು ಅಲ್ಲಿದ್ದ ಇತರೆ ಕಾರ್ಮಿಕರು ಉಪಚಾರ ಮಾಡಿದರು. ನಂತರ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ನಾಗರಾಜ ಅವರ್ಸೆಕರ್ ಅವರನ್ನು ಪರೀಕ್ಷಿಸಿದ ವೈದ್ಯರು `ನಾಗರಾಜ ಇನ್ನಿಲ್ಲ’ ಎಂದು ಹೇಳಿದರು. `ತನ್ನ ಅಕ್ಕನ ಗಂಡನ ಸಾವಿನಲ್ಲಿ ಅನುಮಾನವಿದೆ’ ಎಂದು ಮುದುಗಾ ಸೀಬರ್ಡ ಕಾಲೋನಿಯ ಚಾಲಕ ಜೈಲೇಂದ್ರ ಬಬ್ರುಕರ ಪೊಲೀಸ್ ದೂರು ದಾಖಲಿಸಿದ್ದಾರೆ.