ಭಟ್ಕಳ: ಸರ್ಕಾರದಿಂದ ಬಡವರಿಗೆ ವಿತರಿಸುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಜೀರ್ ಅಹ್ಮದ್ ಸಿಕ್ಕಿ ಬಿದ್ದಿದ್ದು, ಆತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಭಟ್ಕಳ ಗಣೇಶನಗರ ಪುರವರ್ಗದ ನಜೀರ ಅಹ್ಮದ್ ಗುಜುರಿ ವ್ಯಾಪಾರಿ. ಆತ ತನ್ನ ಗುಜುರಿ ವ್ಯಾಪಾರಕ್ಕೆ ಬಳಸುವ ಓಮಿನಿಯಲ್ಲಿ 15 ಮೂಟೆ ಅಕ್ಕಿ ಸಾಗಿಸುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿ 20ರಂದು ನಜೀರ್ ಅಹ್ಮದ್ ಶಿರಾಲಿಯಿಂದ ಹೂವಿನಚೌಕದ ಕಡೆ ಅಕ್ಕಿ ಸಾಗಿಸುತ್ತಿದ್ದ. ಅರ್ಬನ್ ಬ್ಯಾಂಕ್ ಎದುರು ಆಹಾರ ನಿರೀಕ್ಷಕ ಶಶಿಧರ ಹೊನ್ನಳ್ಳಿ ಇದನ್ನು ತಡೆದರು.
ಓಮಿನಿ ಒಳಗೆ ಪರಿಶೀಲನೆ ನಡೆಸಿದಾಗ 520 ಕೆಜಿ ಸರ್ಕಾರಿ ಅಕ್ಕಿ ಪತ್ತೆಯಾಯಿತು. ಈ ಅಕ್ಕಿ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದಾಗ ನಜೀರ್ ಉತ್ತರಿಸಲಿಲ್ಲ. 17680ರೂ ಮೌಲ್ಯದ ಅಕ್ಕಿಗೆ ಸಂಬoಧಿಸಿದ ಬಿಲ್ ಒದಗಿಸುವಂತೆ ಸೂಚಿಸಿದರೂ ಮಾತನಾಡಲಿಲ್ಲ. ಸರ್ಕಾರಿ ಅಕ್ಕಿ ಕಳ್ಳ ಸಾಗಾಟ ಮಾಡಿದ ಕಾರಣ ಆಹಾರ ನಿರೀಕ್ಷಕ ಶಶಿಧರ ಹೊನ್ನಳ್ಳಿ ಅವರು ನಜೀರ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.