ಡೆಹರಾಡನ್ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿ ಪ್ರವೇಶ ಪಡೆಯಲು ಕರ್ನಾಟಕ ಮೂಲದ ಬಾಲಕರಿಗೆ ಹಾಗೂ ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 1ರಂದು ನಡೆಸಲಾಗುತ್ತಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ 13 ವರ್ಷದೊಳಗಿರುವ ಬಾಲಕ ಮತ್ತು ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆ ದಿನ.
ಅರ್ಜಿ ಸಿಗುವ ಸ್ಥಳ:
ನಿರ್ದೇಶಕರು
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ಭವನ
ನಂ 58 ಫೀಲ್ಡ್ ಮಾರ್ಷಲ್ ಕೆ.ಎಮ್ ಕಾರ್ಯಪ್ಪ ರಸ್ತೆ ಬೆಂಗಳೂರು-560025
ಮಾಹಿತಿಗೆ ಬೆಂಗಳೂರು ಕಚೇರಿ: 080-25589459 ಅಥವಾ
ಕಾರವಾರ ಕಚೇರಿ: 08382-226538ನ್ನು ಸಂಪರ್ಕಿಸಿ.
Discussion about this post