ಹೊನ್ನಾವರ: ಜುಲೈ 16ರ ಮಂಗಳವಾರ ಬೆಳಗ್ಗೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಗುಡ್ಡ ಕುಸಿದಿದೆ.
ಹೀಗಾಗಿ ಈ ಮಾರ್ಗದ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯ ಮೇಲೆ ಬಿದ್ದ ಮಣ್ಣು ತೆಗೆಯಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಅಕ್ಕಪಕ್ಕದ ಊರಿನ ಜನ ಸಹ ಸ್ವಯಂ ಪ್ರೇರಣೆಯಿಂದ ಆಗಮಿಸಿ ಶ್ರಮದಾನ ನಡೆಸುತ್ತಿದ್ದಾರೆ. ಆದರೆ, ಮಳೆ ಮುಂದುವರೆದಿದ್ದರಿಂದ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಗಿದೆ.
Discussion about this post