ಕುಮಟಾ: ತದಡಿ ಬಳಿಯ ಅಘನಾಶಿನಿ ನದಿಯಲ್ಲಿ ಶುಕ್ರವಾರ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟುಗಳು ಅಳವೆ ಪ್ರದೇಶದಲ್ಲಿ ಡಿಕ್ಕಿ ಹೊಡೆದಿದ್ದು, ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಬದುಕಿಸಿದರು.
ಸದ್ಗುರು ಹಾಗೂ ಮಂಜುಶ್ರೀ ಹೆಸರಿನ ಬೋಟುಗಳು ಅಲೆಯ ಅಬ್ಬರಕ್ಕೆ ಸಿಲುಕಿ ಅಳುವೆ ಪ್ರದೇಶಕ್ಕೆ ತೆರಳಿ ಸಿಕ್ಕಿಬಿದ್ದಿದ್ದವು. ಎಷ್ಟೇ ಪ್ರಯತ್ನ ನಡೆಸಿದರೂ ಬೋಟುಗಳನ್ನು ದಡಕ್ಕೆ ತರಲು ಸಾಧ್ಯವಾಗಲಿಲ್ಲ. ಒಂದು ಬೋಟು ಸಂಪೂರ್ಣವಾಗಿ ರಾಡಿಮಿಶ್ರಿತ ಮಣ್ಣು-ನೀರಿನಲ್ಲಿ ಮುಳುಗಿದ್ದು ಆ ದೋಣಿಯೊಳಗಿದ್ದ 10ಕ್ಕೂ ಅಧಿಕ ಮೀನುಗಾರರ ಬೊಬ್ಬೆ ಕೇಳಿ ಕರಾವಳಿ ಕಾವಲು ಸಿಬ್ಬಂದಿ ಅಲ್ಲಿ ತೆರಳಿದರು. ತಕ್ಷಣ ಎಲ್ಲರಿಗೂ ಲೈಫ್ ಜಾಕೇಟ್ ನೀಡಿ ಅವರನ್ನು ರಕ್ಷಿಸಿದರು.