ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶ ನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಿ ರಸ್ತೆ ನಿರ್ಮಿಸಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ.
ಅತಿಕ್ರಮಿಸಿದ ರಸ್ತೆಯ ಮದ್ಯಭಾಗದಲ್ಲಿ ಎಚ್ಚರಿಕೆಯ ನಾಮಫಲಕ ಅಳವಡಿಸಿದ್ದಾರೆ. `ಇದು ಸರ್ಕಾರಿ ಜಮೀನು ಆಗಿದ್ದು, ಅತಿಕ್ರಮಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ಫಲಕದಲ್ಲಿ ಬರೆಯಲಾಗಿದೆ. `ಅತಿಕ್ರಮಣವಾಗಿರುವ ಸರ್ಕಾರಿ ಜಾಗಕ್ಕೆ ಹೊಂದಿಕೊoಡoತೆ ಗದ್ದೆಯಿದ್ದು, ಇದನ್ನು ಮೂರು ಜನ ಸೇರಿ ಆರು ಜನರಿಗೆ ಮಾರಾಟ ಮಾಡಿದ್ದರು. ಮಾರಾಟದ ವೇಳೆ ಅನಾಧಿಕಾಲದಿಂದಲೂ ಇರುವ ಕಾಲುದಾರಿ ಹೊರತುಪಡಿಸಿ, ಇನ್ನೊಂದು ಕಡೆ ರಸ್ತೆ ನಿರ್ಮಿಸಿಕೊಟ್ಟಿದ್ದರು. ಕ್ಷೇತ್ರವನ್ನು ಭೂ ಪರಿವರ್ತನೆ ಮಾಡದೇ, 3-5 ಗುಂಟೆ ಲೆಕ್ಕಾಚಾರದಲ್ಲಿ ಮಾರಾಟ ಮಾಡಿದ್ದು, ಈ ಬಗ್ಗೆ ಮಂಜುನಾಥ ಭಟ್ಟ ಎಂಬಾತರು ಭೂ ನ್ಯಾಯ ಮಂಡಳಿಗೆ ದೂರು ಸಲ್ಲಿಸಿದ್ದರು. ನ್ಯಾಯ ಮಂಡಳಿಯ ಸೂಚನೆ ಪ್ರಕಾರ ಇದೀಗ ಕಂದಾಯ ಅಧಿಕಾರಿಗಳು ಸರ್ಕಾರಿ ಜಾಗದ ರಕ್ಷಣೆಗೆ ಮುಂದಾಗಿದ್ದಾರೆ.
Discussion about this post