`ಹಳೆ ಸೇತುವೆಗೆ ಸುಣ್ಣ ಬಣ್ಣ ಮಾಡಿ ಪ್ರಯೋಜನವಿಲ್ಲ. ಸೇತುವೆ (Bridge collapse) ಅಪಾಯ ಇರುವ ಕಡೆ ಹೊಸ ಸೇತುವೆ ನಿರ್ಮಾಣ ಅನಿವಾರ್ಯ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಕಾಳಿ ನದಿಗೆ ಅಡ್ಡಲಾಗಿದ್ದ ಹಳೆಯ ಸೇತುವೆ ಕುಸಿತದಿಂದ ನದಿ ಆಳಕ್ಕೆ ಬಿದ್ದ ಲಾರಿಯನ್ನು ಮೇಲೆತ್ತುವ ಕೆಲಸ ನಡೆಯುತ್ತಿದ್ದು, ಆ ಕಾರ್ಯಾಚರಣೆ ವೀಕ್ಷಿಸಿ ಅವರು ಮಾತನಾಡಿದರು.
`ಪ್ರಸ್ತುತ ಕಾಳಿ ನದಿಗೆ ಅಡ್ಡಲಾಗಿ ಹೊಸದಾಗಿ ನಿರ್ಮಿಸಿದ ಸೇತುವೆ ಮೇಲೆ ಎರಡು ಕಡೆಯಿಂದ ವಾಹನ ಓಡಾಡುತ್ತಿದ್ದು, ಇನ್ನೊಂದು ಸೇತುವೆ ನಿರ್ಮಾಣ ಅನಿವಾರ್ಯ’ ಎಂದವರು ಹೇಳಿದರು. `ಇನ್ನೊಂದು ಸೇತುವೆಯನ್ನು ಗುತ್ತಿಗೆ ಪಡೆದ IRB ಕಂಪನಿ ಮಾಡಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಅದನ್ನು ನಿರ್ಮಿಸಬೇಕು. ಈ ಎರಡು ಕಡೆಯಿಂದ ಆಗಿಲ್ಲ ಎಂದಾದರೆ ನಾವಾದರೂ ಅದನ್ನು ಮಾಡಲೇಬೇಕು. 2ನೇ ಸೇತುವೆ ಮಾಡದೇ ಗತಿ ಇಲ್ಲ’ ಎಂದವರು ಹೇಳಿದರು.
`ಉಳಿದ ಪ್ರದೇಶಗಳಲ್ಲಿ ಸಹ ಹಳೆಯ ಸೇತುವೆಗಳಿಗೆ ಸುಣ್ಣ-ಬಣ್ಣ ಹಚ್ಚಿ ಹೊಸದರಂತೆ ಮಾಡಿದರೆ ಆಗುವುದಿಲ್ಲ. ಎಲ್ಲಾ ಕಡೆ ಹೊಸ ಸೇತುವೆ ಅಗತ್ಯ’ ಎಂದವರು ಹೇಳಿದರು. `ಮತ್ತೆ ಯಾವುದೇ ದುರಂತ ಆಗುವುದು ಬೇಡ. ಈ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದ್ದೇನೆ’ ಎಂದರು. ಶಿರೂರಿನಲ್ಲಿ ನೀರಿನ ಒಳಗೆ ಮಣ್ಣಿನ ಅಡಿ ಲಾರಿ ಸಿಲುಕಿದೆ. ಅದನ್ನು ತೆಗೆಯುವ ಪ್ರಯತ್ನ ನಡೆದಿದೆ’ ಎಂದರು.
ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..
Discussion about this post