ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಏಪ್ರಿಲ್ 11ರಂದು ಯಲ್ಲಾಪುರಕ್ಕೆ ಬರಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಜನಾಕ್ರೋಶದ ಯಾತ್ರೆ ಸಂಚರಿಸಲಿದೆ.
`ಕಾ0ಗ್ರೆಸ್ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತ, ವೋಟ್ ಬ್ಯಾಂಕ್ ರಾಜಕಾರಾಣ, ದಲಿತ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಯ ದುರುಪಯೋಗ, ಮುಸ್ಲಿಂ ಸಮುದಾಯದ ಓಲೈಕೆ ವಿರುದ್ಧ ಈ ಜಾಥಾ ನಡೆಯಲಿದೆ. ಏ 11ರಂದು ಬೆಳಗ್ಗೆ 10 ಗಂಟೆಗೆ ಶಕ್ತಿ ದೇವತೆಯರಾದ ಗ್ರಾಮದೇವಿಯರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅದಾದ ನಂತರ ಪಾದಯಾತ್ರೆ ಮುಂದೆ ಸಾಗಲಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಗೋಪಾಲಕೃಷ್ಣ ಗಾಂವ್ಕರ್, ಉಮೇಶ್ ಭಾಗ್ವತ್, ಪ್ರಶಾಂತ ನಾಯ್ಕ್, ಶಿವಾಜಿ ನರಸಾನಿ, ಚಂದ್ರಕಲಾ ಭಟ್, ರಜನಿ ಚಂದ್ರಶೇಖರ್, ಕೆ ಟಿ ಹೆಗಡೆ, ಎನ್ ಕೆ ಭಟ್ ಅಗ್ಗಾಶಿಕುಂಬ್ರಿ, ಗಣಪತಿ ಮಾನಿಗದ್ದೆ, ರವಿಕೈಟ್ಕರ್, ನಟರಾಜ ಗೌಡರ್, ಸೋಮೇಶ್ವರ ನಾಯ್ಕ್, ರಜತ್ ಬದ್ದಿ ಇತರರು ಇದ್ದರು.