ಭಟ್ಕಳ: ಡಾ ಸಚಿನ್ ಭಟ್ಟ ಹಾಗೂ ಪ್ರೊ ಅಲಕಾ ಅನಂತ್ ದಂಪತಿಗೆ ಕರ್ನಾಟಕ ಸರ್ಕಾರದ `ತಳಹಂತದ ನಾವೀನ್ಯತಾ ಪುರಸ್ಕಾರ’ ದೊರೆತಿದೆ.
ಸುಸ್ಥಿರ ಅಭಿವೃದ್ಧಿ ಹಾಗೂ ತಳ ಮತ್ತು ಗ್ರಾಮೀಣ ಹಂತದ ಜನರಿಗೆ ನೆರವಾಗುವ ತಂತ್ರಜ್ಞಾನದ ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಈ ವರ್ಷದಿಂದ ಈ ಪುರಸ್ಕಾರ ನೀಡಲು ಶುರುಮಾಡಿದೆ. ಡಾ ಸಚಿನ್ ಭಟ್ಟ ತಮ್ಮ ಪತ್ನಿ ಅಲಕಾ ಅನಂತ್ ಜೊತೆ ಸೇರಿ ಕುಮಟಾದಲ್ಲಿ `ಅಲರ್’ ಎಂಬ ಸ್ಟಾರ್ಟಪ್ನ್ನು ಪ್ರಾರಂಭಿಸಿದ್ದು, ಈ ಸ್ಟಾರ್ಟಅಪ್ನ ಮೂಲಕ ನಡೆದ ಎರಡು ಸಂಶೋಧನೆಗಳಿಗೆ ರಾಜ್ಯ ಸರಕಾರದಿಂದ ಪುರಸ್ಕಾರ ಲಭಿಸಿದೆ.
ಶಸ್ತ್ರಚಿಕಿತ್ಸೆಯಲ್ಲಿ ಶುಶ್ರೂಕರಿಗೆ ನೆರವಾಗುವ ತಂತ್ರಜ್ಞಾನ ಹಾಗೂ ಕಟ್ಟಡ ನಿರ್ಮಾಣದಲ್ಲಿ ಮಣ್ಣಿನ ಧಾರಣಾ ಸಾಮರ್ಥ್ಯವನ್ನು ಅಳೆಯುವ ಉಪಕರಣವನ್ನು ಅವರು ಕಂಡುಹಿಡಿದಿದ್ದಾರೆ. ಡಾ. ಸಚೀನ್ ಕೃತಕ ಬುದ್ಧಿಮತ್ತೆಯ ಸಂಶೋಧಕರಾಗಿದ್ದಾರೆ.
Discussion about this post