ಕಾರವಾರ: ಮೀನು ಸೇವನೆ ಉತ್ತೇಜಿಸುವುದಕ್ಕಾಗಿ ಸರ್ಕಾರ `ಮತ್ಸ್ಯ ವಾಹಿನಿ’ ಯೋಜನೆ ಜಾರಿಗೆ ತಂದಿದ್ದು, ಮೀನು ಮಾರಾಟಗಾರರಿಗೆ ಈ ಯೋಜನೆ ಅಡಿ ಮೂರು ಚಕ್ರದ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನೆರವು ನೀಡುತ್ತಿದೆ. ನವೆಂಬರ್ 11ರ ಒಳಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಈ ಯೋಜನೆ ಅನುಕೂಲವಾಗಲಿದೆ.
ತಾಜಾ ಮೀನು ಹಾಗೂ ಮೀನು ಉತ್ಪನ್ನ ಮಾರಾಟಕ್ಕಾಗಿ ಆಸಕ್ತರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಸಾಮಾನ್ಯ ವರ್ಗದ ಮೀನು ಮಾರಾಟಗಾರರು 1 ಲಕ್ಷ ರೂ, ಮಹಿಳೆ ಹಾಗೂ ಪರಿಶಿಷ್ಟ ಸಮುದಾಯದವರು 50 ಸಾವಿರ ರೂ ಭದ್ರತಾ ಠೇವಣಿಯಿಡುವುದು ಕಡ್ಡಾಯ. ಇದರೊಂದಿಗೆ ವಾಹನಕ್ಕೆ ಮಾಸಿಕ 3 ಸಾವಿರ ರೂ ಬಾಡಿಗೆ ಪಾವತಿಸಬೇಕು.
ಈ ಯೋಜನೆ ಅಡಿ ತ್ರಿಚಕ್ರ ವಾಹನ ಪಡೆಯಲು ಆಸಕ್ತಿ ಇದ್ದವರು ನಿಮ್ಮ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ.