ಬಿಸಿಲಿನ ಬೇಗೆಯಿಂದ ಕಾದಿದ್ದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ತ್ಯಾಜ್ಯದ ಜೊತೆ ಅಕ್ಕ-ಪಕ್ಕದ ಪ್ರದೇಶಗಳು ಹೊತ್ತಿ ಉರಿದಿದೆ.
ಅಂಕೋಲಾ ತಾಲೂಕಿನ ಬೋಗ್ರಿಬೈಲಿನಲ್ಲಿ ಪುರಸಭೆ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಿದೆ. ಭಾನುವಾರ ಮಧ್ಯಾಹ್ನದ ವೇಳೆ ಇಲ್ಲಿ ಅಗ್ನಿ ಅವಘಡ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ಎರಡನೇ ಬಾರಿ ನೀರು ತುಂಬಿಸಿಕೊAಡು ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯ ಜ್ವಾಲೆ ಬೇರೆ ಕಡೆ ಹರಡದಂತೆ ಎಚ್ಚರವಹಿಸಿದರು. ಅದಾಗಿಯೂ ಇಲ್ಲಿನ ಸಿಸಿ ಕ್ಯಾಮರಾ ಸೇರಿ ಅನೇಕ ವಸ್ತುಗಳಿಗೆ ಹಾನಿಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ತಗುಲಿದ್ದರಿಂದ ದಟ್ಟ ಹೊಗೆ ಕಾಣಿಸಿತು.