6

ಕಳ್ಳನನ್ನು ಕರೆತರುತ್ತಿದ್ದ ಕಾರಿಗೆ ಕಂಟೇನರ್ ಡಿಕ್ಕಿ: ಪೊಲೀಸರ ಸ್ಥಿತಿ ಗಂಭೀರ

ಗೋವಾದಿoದ ಕಳ್ಳನನ್ನು ಬಂಧಿಸಿ ಕರೆತರುತ್ತಿದ್ದ ಕಾರಿಗೆ ಕಂಟೇನರ್ ಗುದ್ದಿದ ಪರಿಣಾಮ ಕಳ್ಳನ ಜೊತೆ ಪೊಲೀಸರು ಗಾಯಗೊಂಡಿದ್ದಾರೆ.

ಬುಧವಾರ ಹಳಿಯಾಳ ಠಾಣೆಯ ಪೊಲೀಸರು ಗೋವಾಗೆ ತೆರಳಿದ್ದರು. ಆನಮೋಡಿನ ಬಳಿ ಕಳ್ಳನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುತ್ತಿದ್ದರು. ಕಳ್ಳನನ್ನು ಬಂಧಿಸುವ ಕಾರ್ಯಾಚರಣೆಗೆ ಕೆಎ 31 ಎಂ 6701 ನೊಂದಣಿಯ ಖಾಸಗಿ ವಾಹನ ಬಳಸಿದ್ದರು.

ಜೊಯಿಡಾ ತಾಲೂಕಿನ ರಾಮನಗರದ ಬಳಿ ಆ ಕಾರಿಗೆ ಕಂಟೇನರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂ ಆಗಿದೆ. ಕಳ್ಳನನ್ನು ಸೇರಿ ಕಾರಿನ ಒಳಗಿದ್ದ ಹಲವರು ಗಾಯಗೊಂಡಿದ್ದಾರೆ. ಪಿಎಸ್‌ಐ ಅಮೀನ ಅಖ್ತರ್, ಪೊಲೀಸ್ ಸಿಬ್ಬಂದಿ ಇಸ್ಮಯಲ್ ಕೋಟನಕೇರಿ, ಹನೀಪ ಮುಲ್ಲಾ, ಲಕ್ಷö್ಮಣ ಪೂಜಾರಿ ಹೋಂ ಗಾರ್ಡ ರವಿ ಮಿರಾಜಕರ್ ಗಂಭೀರ ಗಾಯಗೊಂಡವರು. ಈ ಪೈಕಿ ಇಬ್ಬರು ಪೊಲೀಸರ ಸ್ಥಿತಿ ಗಂಭೀರವಾಗಿದೆ.

ಗಾಯಗೊoಡ ಎಲ್ಲರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಟೇನರ್ ಚಾಲಕ ತನ್ನ ವಾಹನ ಬಿಟ್ಟು ಪರಾರಿಯಾಗಿದ್ದು, ಆತನ ಶೋಧವೂ ನಡೆಯುತ್ತಿದೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page