6

ಗೋವಾ ಗಡಿಯಲ್ಲಿ ಅಸ್ತಿತ್ವದ ಹೋರಾಟ | ಅಬಕಾರಿ – ಪೊಲೀಸರ ನಡುವೆ ಮುನಿಸು

ಕಾರವಾರ: ಅಕ್ರಮ ಮದ್ಯ ಸಾಗಾಟ, ಅನೈತಿಕ ಚಟುವಟಿಕೆಗಳ ನಿಗ್ರಹ, ಕಳ್ಳ ಸಾಗಾಣಿಕೆ ತಡೆ ಸೇರಿ ಹಲವು ಬಗೆಯ ಅಪರಾಧ ನಿಗ್ರಹಕ್ಕಾಗಿ ಒಟ್ಟಿಗೆ ಶ್ರಮಿಸುತ್ತಿದ್ದ ಅಬಕಾರಿ ಹಾಗೂ ಪೊಲೀಸರ ನಡುವೆ ಇದೀಗ ಬಿನ್ನಾಭಿಪ್ರಾಯ ಮೂಡಿದೆ. ಅಬಕಾರಿ ಅಧಿಕಾರಿಗಳು ಪೊಲೀಸರ ಹೆಸರನ್ನು ಪದೇ ಪದೇ ದುರುಪಯೋಗಪಡಿಸಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣ.

ಈ ಹಿನ್ನಲೆ ಕರ್ನಾಟಕ ಹಾಗೂ ಗೋವಾ ಗಡಿಭಾಗದ ಮಾಜಾಳಿಯಲ್ಲಿ ಇಷ್ಟು ವರ್ಷಗಳ ಜಂಟಿ ಕಾರ್ಯಾಚರಣೆಗಳಿಗೆ ಕಡಿವಾಣ ಬಿದ್ದಿದೆ. ಇನ್ಮುಂದೆ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಪ್ರತ್ಯೇಕವಾಗಿ ವಾಹನ ತಪಾಸಣೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸಲಿದ್ದಾರೆ.

ಇಷ್ಟು ವರ್ಷಗಳ ಕಾಲ ಅಬಕಾರಿ ಇಲಾಖೆಯವರು ಸ್ಥಾಪಿಸಿದ ತನಿಖಾ ಠಾಣೆಯಲ್ಲಿ ಚಿತ್ತಾಕುಲ ಪೊಲೀಸರು ಆಶ್ರಯ ಪಡೆದಿದ್ದರು. ಎರಡು ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಸಮನ್ವಯತೆ ಸಾಧಿಸಿ ಅಪರಾಧ ಪ್ರಕರಣಗಳನ್ನು ಹುಡುಕುತ್ತಿದ್ದರು. ಆದರೆ, ಮಂಡ್ಯದ ಲಾರಿ ಚಾಲಕ ಕುಮಾರ ಗೌಡ ಮೇಲೆ ಅಬಕಾರಿ ಅಧಿಕಾರಿ-ಸಿಬ್ಬಂದಿ ಹಲ್ಲೆ ಮಾಡಿದ ನಂತರ ಪೊಲೀಸರ ಹೆಸರು ಹಾಳಾಗಿದೆ. ಈ ಹಿಂದೆ ಸಹ ಅಬಕಾರಿ ಸಿಬ್ಬಂದಿ ಪೊಲೀಸರ ಹೆಸರು ದುರುಪಯೋಗಪಡಿಸಿಕೊಂಡ ದೂರುಗಳಿದ್ದವು. ಈ ಎಲ್ಲಾ ಕಾರಣಗಳಿಂದ ಅಬಕಾರಿ ಇಲಾಖೆ ತನಿಖಾ ಠಾಣೆ ಮೂಲಕ ಪೊಲೀಸರು ಕಾರ್ಯಾಚರಣೆ ನಡೆಸುವುದನ್ನು ಸದ್ಯ ಸ್ಥಗಿತಗೊಳಿಸಲಾಗಿದ್ದು, ಚಿತ್ತಾಕುಲ ಪೊಲೀಸರು ಸದಾಶಿವಗಡ ಭಾಗದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾರೆ.

ನೆರೆ ರಾಜ್ಯದಿಂದ ವ್ಯಾಪಕ ಪ್ರಮಾಣದಲ್ಲಿ ಗೋವಾ ಮದ್ಯ ರಾಜ್ಯಕ್ಕೆ ಸಾಗಾಟವಾಗುತ್ತದೆ. ಇದರಿಂದ ರಾಜ್ಯ ಸರ್ಕಾರದ ಆದಾಯಕ್ಕೆ ತೊಂದರೆಯಿದ್ದು, ಅದನ್ನು ತಡೆಯುವುದು ಅಬಕಾರಿ ಇಲಾಖೆಯವರ ಮುಖ್ಯ ಕೆಲಸ. ಆದರೆ, ಪೊಲೀಸರ ನೆರವಿಲ್ಲದೇ ಅಬಕಾರಿ ಇಲಾಖೆಯವರಿಂದ ಈ ಕೆಲಸ ಸುಲಭವಲ್ಲ. ಹೀಗಾಗಿ ಇಷ್ಟು ವರ್ಷಗಳ ಕಾಲ ಅಬಕಾರಿ ಸಿಬ್ಬಂದಿ ಪೊಲೀಸರ ಜೊತೆ ಕೈ ಜೋಡಿಸಿದ್ದರು. ಪೊಲೀಸರು ತಡೆದ ಅಕ್ರಮವನ್ನು `ತಾವು ಹಿಡಿದಿದ್ದು’ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಒಂದು ತಿಂಗಳಿನಿoದ ಇಬ್ಬರು ಅಬಕಾರಿ ಸಿಬ್ಬಂದಿ ಮಾತ್ರ ತಪಾಸಣಾ ಕೇಂದ್ರದಲ್ಲಿದ್ದಾರೆ. ಪೊಲೀಸರ ನೆರವಿಲ್ಲದೇ ಅವರಿಂದ ಅಕ್ರಮ ತಡೆ ಸಾಧ್ಯವಾಗುತ್ತಿಲ್ಲ.

ಮಾಜಾಳಿ ಮಾತ್ರವಲ್ಲ, ಆನಮೋಡದಲ್ಲಿ ಸಹ ಅಬಕಾರಿ ಇಲಾಖೆ ಜೊತೆ ಪೊಲೀಸರು ಇದೀಗ ಕೆಲಸ ಮಾಡುತ್ತಿಲ್ಲ. `ನಾವು ಪ್ರತ್ಯೇಕ ಚೆಕ್‌ಪೋಸ್ಟ್ ತೆರೆಯುವ ಸಿದ್ಧತೆಯಲ್ಲಿದ್ದೇವೆ. ಅಕ್ರಮ ತಡೆಗೆ ಎಐಪಿಆರ್ ಕ್ಯಾಮರಾ ಅಳವಡಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದಾರೆ. `ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುತ್ತಿಲ್ಲ. ಅವರು ಬೇರೆ ತಪಾಸಣಾ ಕೇಂದ್ರ ಮಾಡುವ ವಿಚಾರ ಗೊತ್ತಿಲ್ಲ’ ಎಂದು ಅಬಕಾರಿ ಉಪ ಆಯುಕ್ತ ಜಗದೀಶ ಕುಲಕರ್ಣಿ ಹೇಳಿದ್ದಾರೆ.

 

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page