6

ಪ್ರಕೃತಿ ವಿಕೋಪ | ಪರಿಹಾರ ನೀಡದ ವಿಮಾ ಕಂಪನಿ ವಿರುದ್ಧ ಹೋರಾಟ

ಶಿರಸಿ: ಪ್ರಕೃತಿ ವಿಕೋಪದಿಂದ ಸಾಕಷ್ಟು ಹಾನಿ ಆಗಿದ್ದರೂ ವಿಮಾ ಕಂಪನಿಯಿoದ ಪರಿಹಾರ ಬಾರದಿರುವುದನ್ನು ವಿರೋಧಿಸಿ ದಾಸನಕೊಪ್ಪದ ರೈತರು ಮಂಗಳವಾರ ಶಿರಸಿ-ಹಾವೇರಿ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.

ದಾಸನಕೊಪ್ಪ ಸರ್ಕಲಿನಲ್ಲಿ ರಸ್ತೆ ಸಂಚಾರ ಬಂದ್ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ನ್ಯಾಯಾಕ್ಕಾಗಿ ಹಕ್ಕೊತ್ತಾಯ ಮಾಡಿದರು. `ರೈತರ ಸಾಲ ಮನ್ನಾ ಮಾಡಬೇಕು. ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ತಕ್ಕ ಪರಿಹಾರ ನೀಡಬೇಕು. ಅತಿಕ್ರಮಣದಾರರಿಗೆ ಹಕ್ಕುಪತ್ರ ಒದಗಿಸಬೇಕು’ ಎಂದು ಆಗ್ರಹಿಸಿದರು.

ಶಿರಸಿ ವಿಭಾಗಾಧಿಕಾರಿ ಕಾವ್ಯಾರಾಣಿ, ತಹಶೀಲ್ದಾರ ಶೀಧರ ಮುಂದಲಮನಿ, ತಾಲೂಕ ಪಂಚಾಯತ ಇಒ ಸತೀಶ ಹೆಗಡೆ, ಕೃಷಿ ಇಲಾಖೆ ಸಹಾಯಕ ನಿರ್ಧೇಶಕ ಮಧುಕರ ನಾಯ್ಕ, ಹೆಸ್ಕಾಂ ಸಹಾಯಕ ನಿರ್ವಾಹಣಾಧಿಕಾರಿ ನಾಗರಾಜ ಪಾಟೀಲ್, ಉಪವಲಯ ಅರಣ್ಯ ಅಧಿಕಾರಿ ಕಾರ್ತಿಕ ನಾರ್ವೇಕರ, ಡಿವೈಎಸ್‌ಪಿ ಕೆ.ಎಲ್ ಗಣೇಶ ರೈತರ ಅಳಲು ಆಲಿಸಿದರು. ಅಧಿಕಾರಿಗಳು ರೈತರ ಮನವಿಯನ್ನು ಸರ್ಕಾರಕ್ಕೆ ಒಪ್ಪಿಸುವ ಭರವಸೆ ನೀಡಿದರು.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page