6

ಪಶ್ಚಿಮಘಟ್ಟದ ಗುಡ್ಡ ಗಡಗಡ: ಮಲೆನಾಡು ಭಾಗದಲ್ಲಿ ಭೂ ಕಂಪನದ ಅನುಭವ!

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಅನೇಕರು ಭೂಮಿ ಕಂಪನಿಸಿದ ಅನುಭವ ಹಂಚಿಕೊoಡಿದ್ದಾರೆ. ಭಾನುವಾರ ಮಧ್ಯಾಹ್ನ11.50ರ ಆಸುಪಾಸಿನಲ್ಲಿ ಮೂರು ಸೆಕೆಂಡ್ ಕಾಲ ಭೂಮಿ ಕಂಪಿಸಿದೆ. ವಿಪತ್ತು ನಿರ್ವಹಣಾ ಘಟಕ ಈ ಬಗ್ಗೆ ಬೆಂಗಳೂರಿನ ಕಚೇರಿಗೆ ಮಾಹಿತಿ ರವಾನಿಸಿದ್ದು, ಕಂಪನದ ಬಗ್ಗೆ ದಾಖಲಾಗಿಲ್ಲ

ಜೋಗ ಜಲಪಾತದ ಆಸುಪಾಸಿನಲ್ಲಿ ಮೊದಲು ಕಂಪನವಾಗಿದೆ. ಇದರೊಂದಿಗೆ ಶಿರಸಿ ವ್ಯಾಪ್ತಿಯ ದೇವಿಮನೆ ಘಟ್ಟ, ರಾಗಿ ಹೊಸಳ್ಳಿ, ಕಸಗೆ, ಬಂಡಳ ಮೊದಲಾದ ಪ್ರದೇಶದ ಜನ ತಮಗಾದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಟ್ಟಿಕೈ, ಹೆಗ್ಗರಣಿ, ವಾನಳ್ಳಿ, ಮತ್ತಿಘಟ್ಟ, ಸಂಪಖoಡ ಭಾಗದಲ್ಲಿಯೂ ಭೂಮಿ ಕಂಪಿಸಿದೆ. ಸಿದ್ದಾಪುರದ ಕಾನಸೂರು, ಯಲ್ಲಾಪುರದ ಚೌವತ್ತಿ ಭಾಗದಲ್ಲಿಯೂ ಕಂಪನದ ಅನುಭವವಾಗಿದೆ. ಕೆಲವರು ತಮ್ಮ ಮನೆಯೂ ಕಂಪನವಾದ ಅನುಭವವನ್ನು ಹಂಚಿಕೊoಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಕೋಶದವರು ಬೆಂಗಳೂರು ಕಚೇರಿಗೆ ಭೂ ಕಂಪನದ ಬಗ್ಗೆ ಮಾಹಿತಿ ನೀಡಿದ್ದಾರೆ. ಭೂ ಕಂಪನದ ಜೊತೆ ಕೆಲವರು ಗುಡುಗಿದ ಶಬ್ದವನ್ನು ಕೇಳಿದ್ದಾರೆ. ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಶಬ್ದವಾಗಿದೆ. ಹಿಂದೂ ಮಹಾಸಾಗರದ 10 ಕಿಲೋಮೀಟರ್ ಆಳದಲ್ಲಿ ಇದೇ ವೇಳೆ ಭೂ ಕಂಪನ ಆಗಿರುವುದು ಖಚಿತವಾಗಿದೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page