6

ನರಸಿಂಹ ಸ್ವಾಮಿ ದರ್ಶನ | ದ್ವೀಪದ ಜಾತ್ರೆಗೆ ಜನವೋ ಜನ!

ಕಾರವಾರ: ಅರಬ್ಬಿ ಸಮುದ್ರದ ನಡುವಿನ ದ್ವೀಪ ಕೂರ್ಮಗಡದಲ್ಲಿ ಸೋಮವಾರ ನಡೆದ ಜಾತ್ರೆಗೆ ದೇಶದ ನಾನಾ ಭಾಗದ ಭಕ್ತರು ಬಂದಿದ್ದು, ಇಡೀ ದಿನ ಮೀನುಹಾರರ ಆರಾಧ್ಯ ದೇವ ನರಸಿಂಹ ಸ್ವಾಮಿಯ ಆರಾಧನೆ ನಡೆಯಿತು. ಸಾವಿರಾರು ಸಂಖ್ಯೆಯ ಭಕ್ತರು ದೋಣಿಗಳ ಮೂಲಕ ದ್ವೀಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಇಷ್ಟವಾದ ಬಾಳೆಗೊನೆಗಳನ್ನು ಸಲ್ಲಿಸಿ ಹರಕೆ ತೀರಿಸಿದರು.

ಅನಾದಿಕಾಲದಿಂದಲೂ ನಡೆದುಕೊಂದು ಬಂದoತೆ ನರಸಿಂಹ ದೇವರ ಉತ್ಸವ ಮೂರ್ತಿಯನ್ನು ಸೋಮವಾರ ಕಡವಾಡದಿಂದ ದೋಣಿಯ ಮೂಲಕ ಕೂರ್ಮಗಡಕ್ಕೆ ಸಾಗಿಸಲಾಯಿತು. ಅಲ್ಲಿನ ಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬೆಳಗ್ಗೆ ಉತ್ಸವ ಮೂರ್ತಿಯನ್ನು ದೊಣಿಯ ಮೂಲಕ ಮರಳಿ ಕಡವಾಡಕ್ಕೆ ತರಲಾಗುತ್ತದೆ.

ಬೋಟಿನಲ್ಲಿ ಸಂಚರಿಸಿದ ಭಕ್ತರು ದ್ವೀಪದ ಎಲ್ಲಾ ಕಡೆ ಸುತ್ತಾಡಿ ಖುಷಿ ಅನುಭವಿಸಿದರು. ಗೋವಾ-ಮಹಾರಾಷ್ಟç ಸೇರಿ ನಾನಾ ಭಾಗದ ಭಕ್ತರು ಆಗಮಿಸಿದ್ದರು. ಮೀನುಗಾರ ಸಮುದಾಯರವರು ನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಜಾತ್ರೆಗೆ ತೆರಳಲು ಭಕ್ತರಿಗೆ ನಗರದ ಬೈತಖೋಲ್ ಮೀನುಗಾರಿಕೆ ಬಂದರಿನಿoದ ಬೋಟ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮೀನುಗಾರರು ಹರಕೆ ರೂಪದಲ್ಲಿ ಭಕ್ತರನ್ನು ಉಚಿತವಾಗಿ ಬೋಟ್ ಮೂಲಕ ಕರೆದೊಯ್ದರು.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page