6

ಪ್ರಪಂಚ ಪರ್ಯಟನೆಗೆ ಹೊರಟ ಕಡಲಾಮೆಗಳ ಸಾಲು!

45 ದಿನಗಳ ಕಾಲ ಗೂಡಿನಲ್ಲಿ ಬೆಚ್ಚಗಿದ್ದ ಆಮೆ ಮರಿಗಳು ವಿಶಾಲವಾದ ಪ್ರಪಂಚ ನೋಡಲು ಭಾನುವಾರ ಸಮುದ್ರಕ್ಕಿಳಿದಿವೆ. ಕುಮಟಾ ಗಂಗೆಕೊಳ್ಳದ ಕಡಲತೀರದಲ್ಲಿ ಶಾಲಾ ಮಕ್ಕಳು ಆಮೆಗಳನ್ನು ಹಿಡಿದು ನೀರಿಗೆ ಬಿಟ್ಟರು.

ಡಿಸೆಂಬರಿನಿoದ ಮಾರ್ಚ ಅವಧಿ ಕಡಲ ಆಮೆಗಳ ಪಾಲಿಗೆ ಸಂತಾನೋತ್ಪತ್ತಿ ಕಾಲ. ಈ ಅವಧಿಯಲ್ಲಿ ಕಡಲ ತೀರಕ್ಕೆ ಬರುವ ಆಮೆಗಳು ಅಲ್ಲಿ ಮೊಟ್ಟೆಯಿಟ್ಟು ಮರಿ ಸಂರಕ್ಷಿಸುವ ಪ್ರಯತ್ನ ನಡೆಸುತ್ತದೆ. ಆದರೆ, ನಾಯಿ ಹಾಗೂ ಮನುಷ್ಯರ ಅತಿ ಆಸೆಗೆ ಈ ಮೊಟ್ಟೆ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಅರಣ್ಯ ಇಲಾಖೆ ಆಮೆ ಮೊಟ್ಟೆ ರಕ್ಷಣೆಗೆ ವಿಶೇಷ ಪ್ರಯತ್ನ ನಡೆಸುತ್ತಿದೆ.

ಆಮೆ ಮೊಟ್ಟೆಯಿಟ್ಟಿರುವ ಸುದ್ದಿ ಗೊತ್ತಾದಲ್ಲಿ ಅರಣ್ಯ ಸಿಬ್ಬಂದಿ ಅದನ್ನು ರಕ್ಷಿಸುತ್ತಾರೆ. 45 ದಿನಗಳ ಕಾಲ ಜೋಪಾನ ಮಾಡಿ ಮೊಟ್ಟೆಯಿಂದ ಮರಿ ಹೊರ ಬಂದ ನಂತರ ಅದನ್ನು ಕಡಲಿಗೆ ಬಿಡುತ್ತಾರೆ. ಈ ವರ್ಷ ಕುಮಟಾ ಭಾಗದಲ್ಲಿ 50 ಗೂಡು ದೊರೆತಿದ್ದು, ಅಲ್ಲಿದ್ದ 4756 ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ.

ಭಾನುವಾರ ಆ ಪೈಕಿ 80 ಆಮೆಗಳು ಮೊಟ್ಟೆಯಿಂದ ಹೊರ ಬಂದಿವೆ. ಗಂಗೆಕೊಳ್ಳದ ಕಡಲತೀರದಲ್ಲಿ ಶಾಲಾ ಮಕ್ಕಳು ಆ ಮರಿಗಳನ್ನು ಸಮುದ್ರಕ್ಕೆ ಬಿಟ್ಟು ಖುಷಿಪಟ್ಟರು.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page