6

ಹುಬ್ಬಳ್ಳಿ-ಅಂಕೋಲಾ: ಎಲ್ಲಿಯವರೆಗೆ ಬಂತು ಚುಕುಪುಕು ರೈಲು?

ಕಳೆದ ವಾರ ಅರಬೈಲ್ ಘಟ್ಟದಲ್ಲಿ ನಡೆದ ದುರಂತದಿoದ 10 ಜನ ಸಾವನಪ್ಪಿದ ಬೆನ್ನಲ್ಲೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಚಟುವಟಿಕೆಯ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಹೆದ್ದಾರಿ ಅಗಲೀಕರಣದ ಜೊತೆ `ರೈಲು ಮಾರ್ಗದ ಪ್ರಯಾಣ ಸುರಕ್ಷಿತ’ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ.

ಈ ಚರ್ಚೆಗೂ ಮೊದಲೇ ಭಾರತೀಯ ವನ್ಯಜೀವಿ ಸಂಸ್ಥೆಯ 15ಕ್ಕೂ ಅಧಿಕ ತಜ್ಞರು ಯಲ್ಲಾಪುರದಿಂದ ಬಾಳೆಗುಳಿವರೆಗಿನ ಕಾಡು ಸುತ್ತಾಟದಲ್ಲಿ ತೊಡಗಿದ್ದಾರೆ. ಇಲ್ಲಿನ ಮಣ್ಣಿನ ಗುಣ, ವನ್ಯಜೀವಿಗಳ ಚಲನವಲನ, ಅಪರೂಪದ ಗಿಡ-ಮರಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಕಳೆದ 25 ವರ್ಷಗಳಿಂದಲೂ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿದೆ. ರೈಲ್ವೇ ಯೋಜನೆ ಬೇಕು-ಬೇಡ ಎನ್ನುವುದರ ಬಗ್ಗೆ ರಾಷ್ಟಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಒಮ್ಮೆ `ರೈಲ್ವೆ ಬೇಕು’ ಎನ್ನುವವರು ಮುನ್ನಡೆ ಸಾಧಿಸಿದರೆ ಇನ್ನೊಮ್ಮೆ `ರೈಲ್ವೆ ಯೋಜನೆ ಬೇಡ’ ಎನ್ನುವವರು ಮುನ್ನಡೆ ಸಾಧಿಸುತ್ತಿದ್ದಾರೆ.

ಈ ನಡುವೆ ಕಳೆದ ಒಂದು ತಿಂಗಳಿನಿoದ ಯಲ್ಲಾಪುರ – ಅಂಕೋಲಾ ತಾಲೂಕಿನಲ್ಲಿ ರೈಲ್ವೆ ಹಳಿ ಹಾದುಹೋಗಬಹುದಾದ ಅರಣ್ಯ ಪ್ರದೇಶದಲ್ಲಿ ಡೆಹರಾಡೂನಿನ ಭಾರತೀಯ ವನ್ಯಜೀವಿ ಸಂಸ್ಥೆಯವರು ಬೀಡು ಬಿಟ್ಟಿದ್ದಾರೆ. 15ಕ್ಕೂ ಅಧಿಕ ಜನ ಇಲ್ಲಿ ಸಂಚಾರ ನಡೆಸಿದ್ದಾರೆ. ಸಸ್ಯ ಸಂಕುಲಗಳ ಅಧ್ಯಯನ ನಡೆಸುತ್ತಿರುವ ಅವರು ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಬರುವುದರಿಂದ ಜಿಲ್ಲೆಗೆ ಬಂದಿರುವ ತಜ್ಞರು ಇಲ್ಲಿನ ಅಪರೂಪದ ಪ್ರಬೇಧಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರತಿ 1ಕಿಮೀ ಅಂತರದಲ್ಲಿ ಕ್ಯಾಮರಾ ಅಳವಡಿಸಿ ಅಲ್ಲಿ ಓಡಾಡುವ ಪ್ರಾಣಿಗಳ ಸಾಕ್ಷಿ ಸಂಗ್ರಹಿಸಿದ್ದಾರೆ.

`ಹುಬ್ಬಳ್ಳಿ-ಅoಕೋಲಾ ರೈಲ್ವೆ ಯೋಜನೆಯಿಂದ ಪಶ್ಚಿಮ ಘಟ್ಟದ ಅರಣ್ಯ ಹಾನಿಯಾಗಲಿದೆ’ ಎಂದು ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. `ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಜಾರಿಗೆ ಅಭ್ಯಂತರ ಇಲ್ಲ’ ಎಂದು 2016ರಲ್ಲಿ ಹಸಿರು ಪೀಠ ಹೇಳಿತ್ತು. ಅದಾಗಿಯೂ ಪುನಃ ಹೈಕೋರ್ಟ್ನಲ್ಲಿ ದಾವೆ ಸಲ್ಲಿಕೆಯಾಗಿದ್ದು, ವನ್ಯಜೀವಿ ಮಂಡಳಿಯ ಸಹಾಯದೊಂದಿಗೆ ಅಧ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸಲು ಹೈ ಕೋರ್ಟ ರೈಲ್ವೆ ಇಲಾಖೆಗೆ ಸೂಚಿಸಿತ್ತು.

ಹೀಗಾಗಿ ನೈರುತ್ಯ ರೈಲ್ವೆಯ ಎಂಜಿನಿಯರಿAಗ್ ವಿಭಾಗ ಸಹ ಯಲ್ಲಾಪುರ-ಅಂಕೋಲಾ ಭಾಗದಲ್ಲಿ ಸರ್ವೇ ನಡೆಸಿದೆ. ಹಳಿ ಬರುವ ಕ್ಷೇತ್ರಗಳನ್ನು ಪರಿಶೀಲಿಸಿದೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page