6

ಚಿಗಳ್ಳಿ ದೀಪ: ಆರದಿರಲಿ ಬೆಳಕು!

ಕಳೆದ 45 ವರ್ಷಗಳಿಂದ ಎಣ್ಣೆ ಹಾಗೂ ಬತ್ತಿ ಇಲ್ಲದೇ ಉರುಯುವುದಾಗಿ ನಂಬಲಾಗಿದ್ದ ಚಿಗಳ್ಳಿಯ ಬುಧವಾರ ಆರಿದೆ. ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ ಅವರು ಇದನ್ನು ದೃಢೀಕರಿಸಿದ್ದಾರೆ.

`1979ರಲ್ಲಿ ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬ ದೈವ ಭಕ್ತೆ ಸಿಮೇಎಣ್ಣೆ ಹಾಕಿ ಒಂದು ಲಾಟೀನ್ ದೀಪವನ್ನು ಹಚ್ಚಿದಾಗ ಅದು ನಿರಂತರವಾಗಿ ಉರಿಯ ತೋಡಗಿತು. ಅದನ್ನು ಕಂಡು ಆಶ್ಚರ್ಯಗೊಂಡ ಶಾರದಮ್ಮ 1980ರಲ್ಲಿಯೂ ಮತ್ತೊಂದು ದೀಪವನ್ನು ಹಚ್ಚಿಟ್ಟಾಗ ಅದೂ ಸಹ ನಿರಂತರವಾಗಿ ಬೆಳಗಿತು. ನಂತರ 15 ದಿನ ಬಿಟ್ಟು ಮತ್ತೊಂದು ದೀಪವನ್ನು ಹಚ್ಚಿದಾಗ ಅದೂ ಸಹ ನಿರಂತರವಾಗಿ ಬೆಳಗುತ್ತದೆ’ ಎಂಬ ದಂತಕಥೆ ಇಲ್ಲಿದೆ. ಆ ನಂತರ ಚಿಗಳ್ಳಿಯಲ್ಲಿ ಮೂರು ದೀಪಗಳು ನಿರಂತರವಾಗಿ ಉರಿಯುತ್ತಿದ್ದ ಪ್ರತೀತಿಯಿದ್ದು, ಇದನ್ನು ನೋಡಲು ದೇಶ-ವಿದೇಶಗಳಿಂದ ಜನ ಬರುತ್ತಿದ್ದರು. ಇಲ್ಲಿ ಗುಡಿಯೊಂದನ್ನು ನಿರ್ಮಿಸಲಾಗಿತ್ತು.

ಈ ದೀಪಗಳನ್ನು ಹಚ್ಚಿದ ಶಾರದಮ್ಮ ಹಲವು ವರ್ಷಗಳ ನಂತರ ಸಾವನ್ನಪ್ಪಿದರು. ಅವರ ಸಂಬAಧಿಕರು ಈ ದೀಪಗಳನ್ನು ಪೂಜೆ ಮಾಡುತ್ತಾ ಬಂದಿದ್ದರು. ಬುಧವಾರ ಮೂರು ದೀಪಗಳು ಆರಿರುವ ಸುದ್ದಿ ಹರಡಿದ್ದರಿಂದ ಭಕ್ತರ ದಂಡು ಚಿಗಳ್ಳಿಗೆ ಆಗಮಿಸುತ್ತಿದ್ದರು. ಇದೀಗ ಆ ದೀಪಗಳ ಕುರಿತು ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ ಅವರು ಮಾಹಿತಿ ನೀಡಿದ್ದಾರೆ. `ದೀಪನಾಥೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುತ್ತಿರುವ ವೆಂಕಟೇಶ ಅವರು ಜನವರಿ 23ರಂದು ನಿಧನರಾಗಿದ್ದಾರೆ. ಅವರ ಸಂಸ್ಕಾರ ಕಾರ್ಯವನ್ನು ಗೋಕರ್ಣದಲ್ಲಿ ಮಾಡಲಾಗಿದೆ. ವೈಕುಂಠ ಸಮಾರಾಧನೆ ಮುಗಿಸಿ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ತೆರೆದಾಗ ದೀಪಗಳು ಶಾಂತವಾಗಿರುವುದು ಕಾಣಿಸಿದೆ. ಈ ಬಗ್ಗೆ ಇನ್ನಷ್ಟು ವಿಚಾರ ಮಾಡುವ ಅಗತ್ಯಿವೆ’ ಎಂದು ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ ಅವರು ಹೇಳಿದ್ದಾರೆ.

`ಇಲ್ಲಿನ ಮೂರು ದೀಪಗಳು 45 ವರ್ಷಗಳಿಂದಲೂ ನಿರಂತರವಾಗಿ ಉರಿಯುತ್ತಿದ್ದವು. ಭಕ್ತರಿಗೆ ದರ್ಶನ ನೀಡಿ ಅವರ ಕಷ್ಟಗಳನ್ನು ದೂರ ಮಾಡುತ್ತಿದ್ದವು. ಇದೀಗ ಏಕಾಏಕಿ ದೀಪ ಶಾಂತವಾಗಿರುವುದರಿoದ ಮುಂದಿನ ಪವಾಡವನ್ನು ನಿರೀಕ್ಷಿಸಲಾಗುತ್ತಿದೆ. ಗ್ರಾಮಸ್ಥರಿಂದ ಹೋಮ ನಡೆಸಲು ನಿರ್ಧರಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ. `ಈಗಾಗಲೇ ಈ ಸ್ಥಳದಲ್ಲಿ ಈಶ್ವರ, ಬಸವಣ್ಣ, ಮಹಾಗಣಪತಿ, ಜ್ಞಾನೇಶ್ವರಿ, ಐದು ತಲೆ ನಾಗ, ದತ್ತಾತ್ರೇಯ, ಚೌಡೇಶ್ವರಿ, ಭೂತರಾಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಶಿವಮೊಗ್ಗದ ರಾಘವೇಂದ್ರ ಗುಡಿಗಾರ ಅವರು ಶಿಲೆಗಳನ್ನು ರೂಪಿಸುತ್ತಿದ್ದು, ಸಿದ್ಧಿ ಸ್ಥಳದಲ್ಲಿ ಉತ್ತಮ ದೇಗುಲ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page