6

ಖರಿದಿ ಮರುದಿನವೇ ಅಪಘಾತವಾದ ಕಾರು: ದೇವಾಲಯಕ್ಕೆ ಹೊರಟವರು ಆಸ್ಪತ್ರೆ ಸೇರಿದರು

ಅoಕೋಲಾ: ನಿನ್ನೆ ಅವರು ಹೊಸ ಕಾರು ಖರೀದಿಸಿದ್ದರು. `ಮುರುಡೇಶ್ವರಕ್ಕೆ ತೆರಳಿ ಕಾರಿಗೆ ಪೂಜೆ ಮಾಡೋಣ’ ಎಂದುಕೊoಡಿದ್ದರು. ಅದೇ ಕಾರಿನಲ್ಲಿ ಕುಳಿತು ತೆಲಂಗಾಣದಿoದ ಹೊರಟಿದ್ದ 8 ಜನರಿಗೆ ಜೂ 22ರಂದು ಅಂಕೋಲಾದ ಶೆಟಗೇರಿ ತಿರುವಿನಲ್ಲಿ ಅಪಘಾತವಾಗಿದೆ. ಪರಿಣಾಮ ಎಲ್ಲರೂ ಗಾಯಗೊಂಡಿದ್ದು, ಕಾರು ಜಖಂ ಆಗಿದೆ. ಗಾಯಗೊಂಡವರ ಪೈಕಿ ಇಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹೈದರಾಬಾದ್’ನಲ್ಲಿ ಕಾರು ಖರೀದಿಸಿದ ಕುಟುಂಬದವರು ಹೊಸ ಕಾರು ಬಂದ ಖುಷಿಯಲ್ಲಿದ್ದರು. ಅಲ್ಲಿಂದ ನೇರವಾಗಿ ಮುರುಡೇಶ್ವರಕ್ಕೆ ಬರುತ್ತಿದ್ದರು. ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡಿದ್ದರಿoದ ಚಾಲಕ ಕಾರು ನಿಲ್ಲಿಸಲು ಪ್ರಯತ್ನಿಸಿದ್ದು, ಬ್ರೇಕ್ ತಾಗದೇ ಕಾರು ಡಿವೈಡರ್’ಗೆ ತಾಗಿ ಮತ್ತೆ ಮುಂದಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದೆ. ನಂತರ ಹೆದ್ದಾರಿಯ ಇನ್ನೊಂದು ಬದಿಗೆ ಕಾರು ತಿರುಗಿ ಈ ವೇಳೆ ಕಾರಿನಲ್ಲಿದ್ದ ನಾಲ್ಕು ಮಕ್ಕಳು, ಮಹಿಳೆಯರು ಸೇರಿ 8 ಜನ ಗಾಯಗೊಂಡಿದ್ದಾರೆ. ಅಪಘಾತದ ತಕ್ಷಣ ಏರ್‌ಬ್ಯಾಗ್ ತೆರೆದುಕೊಂಡ ಕಾರಣ ಅದರ ಒಳಗಿದ್ದವರು ಜೀವ ಉಳಿಸಿಕೊಂಡಿದ್ದಾರೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    Leave a Reply

    Your email address will not be published. Required fields are marked *

    You cannot copy content of this page