6

ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!

ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. `ತಾನು ಸಾಯುವುದರ ಒಳಗೆ ಆಧಾರ್ ಕಾರ್ಡ ಮಾಡಿಕೊಡಿ’ ಎಂದವರು ಅಳಲು ತೋಡಿಕೊಂಡಿದ್ದಾರೆ. ಈ ವಿಷಯ ಅರಿತ ಅಧಿಕಾರಿಗಳು ತ್ವರಿತವಾಗಿ ಅವರ ಮನೆಗೆ ದೌಡಾಯಿಸಿದ್ದು, ಆ ಪತ್ರ ಪ್ರಧಾನಿ ಕಚೇರಿಗೆ ತಲುಪುವುದರೊಳಗೆ ಆಧಾರ್ ಸೇವೆ ಒದಗಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.

ಯಲ್ಲಾಪುರ ಶಿರಸಿ ಗಡಿಭಾಗದಲ್ಲಿ ಕಾನಗೋಡು ಎಂಬ ಊರಿದೆ. ಅಲ್ಲಿನ ಸರಸ್ವತಿ ರಾಮ ಹೆಗಡೆ ಅವರು ಆಧಾರ್ ಕಾರ್ಡ ಮಾಡಿಸುವುದಕ್ಕಾಗಿ ಕಳೆದ 10 ವರ್ಷಗಳಿಂದ ಕಚೇರಿ ಅಲೆದಾಟ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ವೃದ್ಧರ ಮನೆಗೆ ತೆರಳಿ ಆಧಾರ್ ಕಾರ್ಡ ಮಾಡಿಸುವ ಯೋಜನೆ ರೂಪಿಸಿದರೂ, ಹರಿಯುತ್ತಿರುವ ಹಳ್ಳ ದಾಟಿ ಅಧಿಕಾರಿಗಳು ಸರಸ್ವತಿ ಹೆಗಡೆ ಅವರ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯ, ಕೊರೊನಾ ಕಾಲಘಟ್ಟ ಎಲ್ಲವನ್ನು ಮೀರಿ ಸರಸ್ವತಿ ಹೆಗಡೆ ಅವರು ಅಂಚೆ ಕಚೇರಿಗೆ ಅಲೆದಾಡಿದರೂ ಆಧಾರ್ ಕಾರ್ಡ ಸೇವೆ ಸಿಗಲಿಲ್ಲ.

ಆಧಾರ್ ಕಾರ್ಡ ಬಗ್ಗೆ ವಿಚಾರಿಸುವುದಕ್ಕಾಗಿ ಸರಸ್ವತಿ ಹೆಗಡೆ ಅವರು ಆಧಾರ್ ಕೇಂದ್ರ, ನಾಡ ಕಚೇರಿ, ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿ ಸೇರಿ ಎಲ್ಲಾ ಕಚೇರಿಗಳಿಗೂ ಸುತ್ತಾಡಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಶಾಲೆಯ ಪ್ರಮಾಣ ಪತ್ರ ತರಬೇಕು ಎಂದು ಅಧಿಕಾರಿಗಳು ಸೂಚಿಸಿದ ಕಾರಣ ಶಾಲೆಗೆ ಭೇಟಿ ನೀಡಿದರು. ಆದರೆ, ಅಲ್ಲಿಯೂ ಸರಸ್ವತಿ ಹೆಗಡೆ ಅವರ ವರ್ಗಾವಣೆ ಪ್ರಮಾಣ ಪತ್ರ ಸರಿಯಾಗಿರಲಿಲ್ಲ. ಶಿಕ್ಷಕರು ನೀಡಿದ ಪ್ರಮಾಣ ಪತ್ರವನ್ನು ಅಧಿಕಾರಿಗಳು ಒಪ್ಪಲಿಲ್ಲ. ಹೀಗಾಗಿ, ಕೊನೆ ಪ್ರಯತ್ನವಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಅದರ ಪ್ರತಿಯನ್ನು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಹ ರವಾನಿಸಿದರು.

ಅಜ್ಜಿಮನೆಗೆ ಓಡೋಡಿ ಬಂದ ಅಧಿಕಾರಿಗಳು:


ಮಂಚಿಕೇರಿ ಕಂದಾಯ ನಿರೀಕ್ಷಕ ಎನ್ ಎನ್ ರಾಘವೇಂದ್ರ ಅವರು ಸರಸ್ವತಿ ಹೆಗಡೆ ಅವರ ಮನೆಗೆ ಭೇಟಿ ನೀಡಿ, ಸಮಸ್ಯೆ ಆಲಿಸಿದರು

ಈ ವಿಷಯ ಅರಿತ ಅಧಿಕಾರಿಗಳು ಸರಸ್ವತಿ ಹೆಗಡೆ ಅವರನ್ನು ಹುಡುಕಿ ಮನೆಗೆ ಬಂದರು. ಮಂಚಿಕೇರಿಯ ಉಪತಹಶೀಲ್ದಾರ್ ಎಚ್ ಎನ್ ರಾಘವೇಂದ್ರ ಅವರು ಸರಸ್ವತಿ ಹೆಗಡೆ ಅವರನ್ನು ಮಾತನಾಡಿಸಿ ಸಮಸ್ಯೆ ಆಲಿಸಿದರು. `ಸರ್ಕಾರದ ಎಲ್ಲಾ ಸೌಲಭ್ಯಗಳಿಗೂ ಆಧಾರ್ ಕೇಳುತ್ತಾರೆ. ಆದರೆ, ಆಧಾರ್ ಕಾರ್ಡ ಮಾತ್ರ ಯಾರೂ ಮಾಡಿಕೊಡುತ್ತಿಲ್ಲ’ ಎಂದು ಸರಸ್ವತಿ ಹೆಗಡೆ ಸಮಸ್ಯೆ ವಿವರಿಸಿದರು. `70 ವರ್ಷ ಹಿಂದಿನ ಶಾಲಾ ದಾಖಲೆ, ಚುನಾವಣಾ ಚೀಟಿ ಹಿಡಿದು ಹೋದರೆ ಈ ದಾಖಲೆ ಸಾಲುವುದಿಲ್ಲ ಎನ್ನುತ್ತಾರೆ. ಉಳಿದ ಯಾವ ದಾಖಲೆಯೂ ನನ್ನಲ್ಲಿಲ್ಲ. ನನ್ನ ಮರಣ ನಂತರ ಮಕ್ಕಳಿಗೆ ಮರಣ ಪತ್ರ ಸಿಗುವುದಕ್ಕಾದರೂ ಆಧಾರ್ ಅಗತ್ಯವಿದೆ’ ಎಂದವರು ಕಣ್ಣೀರಾದರು. ಆಧಾರ್ ಜೋಡಣೆ ಮಾಡದ ಕಾರಣ ರೇಶನ್ ಕಾರ್ಡ ಸಹ ರದ್ಧಾಗಿರುವ ಬಗ್ಗೆ ಅಳಲು ತೋಡಿಕೊಂಡರು.

ಅಜ್ಜಿಗೆ ಸಮಾಧಾನ ಮಾಡಿದ ಉಪತಹಶೀಲ್ದಾರ್ ಎಚ್ ಎನ್ ರಾಘವೇಂದ್ರ ಅವರು ಅಲ್ಲಿಂದಲೇ ಆಧಾರ್ ಸಂಯೋಜಕರಿಗೆ ಫೋನ್ ಮಾಡಿದರು. ಗ್ರಾಮ ಆಡಳಿತಾಧಿಕಾರಿ ಶರಣು ತುಂಬಗಿ ಜೊತೆ ಸೇರಿ ದಾಖಲೆಗಳನ್ನು ಪರಿಶೀಲಿಸಿದರು. ಕೊನೆಗೆ `ಎರಡು ದಿನ ಮುಂಚಿತವಾಗಿ ಫೋನ್ ಮಾಡಿಕೊಂಡು ಆಧಾರ್ ಕೇಂದ್ರಕ್ಕೆ ಬನ್ನಿ. ಆಧಾರ್ ಕಾರ್ಡ ಮಾಡಿಕೊಡಿಸುವೆ’ ಎಂದು ಎಚ್ ಎನ್ ರಾಘವೇಂದ್ರ ಅವರು ಭರವಸೆ ನೀಡಿದರು. ಆಧಾರ್ ಸಂಯೋಜನ ಮಹಾಬಲೇಶ್ವರ ದೇಸಾಯಿ ಅವರಿಗೂ ಪರಿಸ್ಥಿತಿಯ ಬಗ್ಗೆ ವಿವರಿಸಿ, ಶಿರಸಿ ಕೇಂದ್ರದಿoದ ಆಧಾರ್ ಕಾರ್ಡ ಕೊಡಿಸುವ ಬಗ್ಗೆ ನಿರ್ಣಯಿಸಿದರು. ಸದ್ಯ ಮಾರ್ಚ 27ರಂದು ಶಿರಸಿಗೆ ತೆರಳಿ ಆಧಾರ್ ಕಾರ್ಡ ಮಾಡಿಸುವುದಾಗಿ ಸರಸ್ವತಿ ಹೆಗಡೆ ಅವರ ಪುತ್ರ ಪ್ರಸಾದ ಹೆಗಡೆ ಮಾಹಿತಿ ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page