6

ಅಲ್ಲಿ ಕ್ರಿಕೆಟ್.. ಇಲ್ಲಿ ಬೆಟ್ಟಿಂಗ್: ಕಾಸಿನ ಬೇಟೆಗೆ ಹೋದವನ ಬಂಧನ!

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮುಂಡಗೋಡಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ಯ ಪಂಜಾಬಿನ ಛಂಡಿಗರದಲ್ಲಿರುವ ಮಹಾರಾಜ ಯಧುವೀರ ಸಿಂಗ್ ಸ್ಟೇಡಿಯಂ’ನಲ್ಲಿ ಕ್ರಿಕೆಟ್ ನಡೆಯುತ್ತಿದೆ. ರಾಜಸ್ಥಾನ ಹಾಗೂ ಪಂಚಾಬ್ ತಂಡದ ನಡುವೆ ನಡೆಯುವ ಹಣಾಹಣಿಯಲ್ಲಿ ಗೆಲ್ಲುವ ತಂಡದ ಅಂದಾಜಿನ ಮೇಲೆ ಮುಂಡಗೋಡು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರು ಜನ ಹಣ ಹೂಡುತ್ತಿದ್ದರು. ಈ ರೀತಿ ಅಕ್ರಮವಾಗಿ ಕಾಸು ಮಾಡಿಕೊಳ್ಳಲು ನಿರ್ಧರಿಸಿದವರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಮುಂಡಗೋಡು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರು ಅಂಬೇಡ್ಕರ ಓಣಿಯ ಮಂಜುನಾಥ ಕೋರವರ್, ಆನಂದನಗರದ ವೆಂಕಟೇಶ ಅರಿವಾಣ, ಗದಗದ ಮಂಜುನಾಥ ಅಸಗಿ, ಚಿಗಳ್ಳಿಯ ಹರೀಶ ಬಾಳೆಮ್ಮನವರ್ ಸೇರಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ರಸ್ತೆಯಲ್ಲಿ ಹೋಗಿ-ಬರುವವರನ್ನು ಕರೆದು ಬೆಟ್ಟಿಂಗ್ ದಂಧೆಯಲ್ಲಿ ಹಣ ತೊಡಗಿಸುವಂತೆ ಅವರೆಲ್ಲರೂ ಪ್ರೇರೇಪಿಸುತ್ತಿದ್ದರು.

ಈ ವಿಷಯ ಅರಿತ ಪೊಲೀಸರು ಅವರ ಮೇಲೆ ದಾಳಿ ನಡೆಸಿದರು. ಆಗ, ಮಂಜುನಾಥ ಕೋರವರ್ ಸಿಕ್ಕಿ ಬಿದ್ದರು. ಉಳಿದ ಮೂವರು ಓಡಿ ಪರಾರಿಯಾದರು. ಸಿಕ್ಕಿಬಿದ್ದ ಮಂಜುನಾಥ ಕೋರವರ್ ಬಳಿ 2300ರೂ ಹಣ, ಮೊಬೈಲ್, ಕ್ರಿಕೆಟ್ ಬೆಟ್ಟಿಂಗ್ ಬರೆದ ಪಟ್ಟಿ-ಪೆನ್ನುಗಳು ಇದ್ದವು. ಅವೆಲ್ಲವನ್ನು ಪೊಲೀಸರು ವಶಕ್ಕೆಪಡೆದರು.

ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಅವರಿಗೆ ಮಾಹಿತಿ ನೀಡಿ ಮುಂಡಗೋಡು ಸಿಪಿಐ ರಮೇಶ ನೀಲಮ್ಮನವರ್ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಮಹಾಂತೇಶ ಮುಧೋಳ, ಅನ್ವರ ಬಮ್ಮನಗಟ್ಟಿ, ನಾಗಪ್ಪ ಎಂ ಕಾರ್ಯಾಚರಣೆಯಲ್ಲಿದ್ದರು.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page