6

ಚೀನಾ ತಂತ್ರಜ್ಞರ ಅವಾಂತರ: ತಲೆಕೆಳಗಾದ ರಾಷ್ಟ್ರಧ್ವಜಕ್ಕೆ 9 ರೂಪಾಯಿ!

ಚೀನಾದವರು ಅಭಿವೃದ್ಧಿಪಡಿಸಿದ pngtree.com ಎಂಬ ವೆಬ್‌ಸೈಟಿನಲ್ಲಿ ಭಾರತೀಯ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಈ ವೆಬ್‌ಸೈಟಿನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ.

ಗುಣಮಟ್ಟದ ಫೋಟೋ ಡೌನ್‌ಲೋಡ್ ಉದ್ದೇಶದಿಂದ pngtree.com ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿದೆ. ಪ್ರಪಂಚದ ನಾನಾ ದೇಶದ ರಾಷ್ಟ್ರಧ್ವಜಗಳು ಇಲ್ಲಿ ಸಿಗುತ್ತದೆ. ಉಚಿತ ಹಾಗೂ 9 ರೂ ಹಣ ಪಾವತಿಸಿ ಧ್ವಜದ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಗ್ರಾಫಿಕ್ ಡಿಸೈನರ್, ಕಂಟೇಟ್ ಕ್ರಿಯೇಟರ್’ಗಳ ಅನುಕೂಲಕ್ಕಾಗಿ ಈ ವೆಬ್‌ಸೈಟ್ ಕಾರ್ಯ ನಿರ್ವಹಿಸುತ್ತಿದೆ.

ಅನೇಕರು ಈ ವೆಬ್‌ಸೈಟಿಗೆ ಭೇಟಿ ನೀಡುತ್ತಾರೆ. ತಮಗೆ ಅನುಗುಣವಾಗಿ ವಿವಿಧ ಫೋಟೋಗಳನ್ನು ಡೌನ್ಲೋಡ್ ಮಾಡುತ್ತಾರೆ. ಈ ರೀತಿ ವೆಬ್‌ಸೈಟಿನಲ್ಲಿ ಬಾವುಟ ಹುಡುಕಿದ ವ್ಯಕ್ತಿಯೊಬ್ಬರಿಗೆ ಧ್ವಜ ಉಲ್ಟಾ ಹಾರಾಟ ನಡೆದಿರುವುದು ಗೊತ್ತಾಗಿದೆ. ಇದನ್ನು ಖಂಡಿಸಿ ವೆಬ್‌ಸೈಟಿನವರಿಗೆ ಅವರು ರಿಪೋರ್ಟ ಸಹ ಮಾಡಿದ್ದಾರೆ. ಆದರೆ, ಈವರೆಗೂ ಧ್ವಜ ಸರಿಯಾಗಿಲ್ಲ. ಗೂಗಲ್’ನಲ್ಲಿ ಇಂಡಿಯನ್ ಪ್ಲಾಗ್ ಎಂದು ಹುಡುಕಿದಾಗ ಭಾರತೀಯ ರಾಷ್ಟ್ರಧ್ವಜ ಉಲ್ಟಾ ಹಾರಾಟ ನಡೆಸಿರುವುದು ಕಾಣಿಸುತ್ತಿದೆ.

 

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page