6

ರಾಷ್ಟ್ರೀಯ ಸ್ಕೆಟ್ ಗೇಮ್ಸ: ಉತ್ತರ ಕನ್ನಡ ಕುವರಿಯರ ಮಹತ್ವದ ಸಾಧನೆ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ `ಇಂಡಿಯಾ ಸ್ಕೆಟ್ ಗೇಮ್ಸ 2024-ಚಾಂಪಿಯನ್ಷಿಪ್’ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಸ್ಕೇಟರ್ಸ್ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಆ 7ರಿಂದ 11ರವರೆಗೆ ಈ ಸ್ಪರ್ಧೆ ನಡೆದಿತ್ತು. ಯಲ್ಲಾಪುರ ತಾಲೂಕಿನಿಂದ YTSS ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ನಾಯ್ಕ ಅವರು ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆದಿದ್ದಾರೆ. ಸೇಜಲ್ ನಾಯ್ಕ ಯಲ್ಲಾಪುರ ಪ ಪಂ ಸದಸ್ಯ ಸತೀಶ್ ನಾಯ್ಕ ಅವರ ಪುತ್ರಿ. ಈ ಹಿಂದೆಯೂ ರಾಷ್ಟ್ರಮಟ್ಟದ ಸ್ಕೇಟಿಂಗ್‌ನಲ್ಲಿ ಅವರು ಭಾಗವಹಿಸಿ ಪದಕ ಗೆದ್ದಿದ್ದರು.

ಇದರೊಂದಿಗೆ ಶಿರಸಿಯ MES ಕಾಲೇಜಿನ ಅನಘಾ ಹೆಗಡೆ ಹಾಗೂ ದಾಂಡೇಲಿಯ ಸಾನಿಕಾ ತೊರತ್ ಸಹ ಪದಕ ಗೆದ್ದಿದ್ದಾರೆ. ಅನಘಾ ಹೆಗಡೆ ಶಿರಸಿಯ ನ್ಯಾಯವಾದಿ ರಮೇಶ ಹೆಗಡೆ ಅವರ ಪುತ್ರಿ. ಸಾನಿಕಾ ತೋರತ್ ದಾಂಡೇಲಿ ಪೆಪರ್ ಮಿಲ್ ಉದ್ಯೋಗಿ ಉಮೇಶ್ ಅವರ ಪುತ್ರಿ.

ತಮಿಳನಾಡು, ಉತ್ತರ ಪ್ರದೇಶ, ಓರಿಸ್ಸಾ, ತಮಿಳನಾಡು, ಮಹಾರಾಷ್ಟ ಸೇರಿ ಇನ್ನಿತರ ರಾಜ್ಯದಿಂದ ಸ್ಪರ್ಧಾಳುಗಳು ಇಲ್ಲಿ ಭಾಗವಹಿಸಿದ್ದು ಅವರೆಲ್ಲರನ್ನು ಮಣಿಸಿ ಈ ಮೂವರು ಸಾಧನೆ ಮಾಡಿದ್ದಾರೆ. ಕಳೆದ 4 ವರ್ಷಗಳಿಂದ ಈ ಸಾಧಕರು ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಸತತ 4ನೇ ಬಾರಿ ಕರ್ನಾಟಕ ತಂಡ ಪ್ರತಿನಿಧಿಸಿದ ಬಗ್ಗೆ ತರಬೇತುದಾರ ದೀಲಿಪ್ ಹಣಬರ್ ಹಾಗೂ ಸಹಾಯಕ ತರಬೇತುದಾರರಾದ ಮಂಜಪ್ಪಾ ನಾಯ್ಕ ಹರ್ಷ ವ್ಯಕ್ತಪಡಿಸಿದರು.

ಇಂಡಿಯಾ ಸ್ಕೆಟ್ ಗೇಮ್ಸ 2024-ಚಾಂಪಿಯನ್ಷಿಪ್’ನಲ್ಲಿ ಈ ಮೂವರು ಸಾಧಕರು ಆಡಿದ ಆಟವ ವಿಡಿಯೋ ಇಲ್ಲಿ ನೋಡಿ..

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    Leave a Reply

    Your email address will not be published. Required fields are marked *

    You cannot copy content of this page