6

Kali bridge | ಕಾಳಿ ಸೇತುವೆ ಸಂಪೂರ್ಣ ಸುರಕ್ಷಿತ! ಈ ವರದಿ ನಂಬುವುದಾದರೂ ಹೇಗೆ?!

ಕಾಳಿ ಸಂಗಮ ಪ್ರದೇಶದಲ್ಲಿರುವ ಕಾಳಿ ಸೇತುವೆ ಬಿರುಕು ಮೂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ವರದಿ ನೀಡುವಂತೆ IRB ಕಂಪನಿಗೆ ಸೂಚಿಸಿದ್ದು, ಒಂದೇ ದಿನದಲ್ಲಿ ತರಾತುರಿಯ ವರದಿ ನೀಡಿದ ಗುತ್ತಿಗೆ ಕಂಪನಿ `ಕಾಳಿ ಸೇತುವೆ ಸುರಕ್ಷಿತ’ ಎಂದು ಮಾಹಿತಿ ನೀಡಿದೆ. ಈ ಸೇತುವೆಯನ್ನು ಅದೇ ಕಂಪನಿ ನಿರ್ಮಿಸಿದ ಕಾರಣ ಈ ವರದಿ ನಂಬುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ.

ವೈರಲ್ ಆದ ವಿಡಿಯೋದಲ್ಲಿ ತೋರಿಸಿರುವ ಪ್ರದೇಶವು `ನಿರ್ಮಾಣ ಹಂತದಲ್ಲಿ ಕಾಂಕ್ರೀಟ್ ಸ್ಲರಿಯ ಅತಿಕ್ರಮಿಸುವಿಕೆಯಿಂದ ಆಗಿರುವುದು’ ಎಂದು IRB ದೃಢಪಡಿಸಿದೆ. `ಸೇತುವೆಗೆ ಸಂಬ0ಧಿಸಿದ0ತೆ ಯಾವುದೇ ರಚನಾತ್ಮಕ ಹಾನಿ ಇರುವ ಸಂಭವವಿರುವುದಿಲ್ಲ’ ಎಂದು IRB ವರದಿಯಲ್ಲಿ ಹೇಳಿಕೊಂಡಿದೆ.

ಸಾರ್ವಜನಿಕರಲ್ಲಿ ಅನಗತ್ಯ ಭಯವನ್ನು ಉಂಟುಮಾಡುವ ಯಾವುದೇ ವೀಡಿಯೊಗಳು ಅಥವಾ ಮಾಹಿತಿಯನ್ನು ಪ್ರಸಾರ ಮಾಡದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚಿಸಿದ್ದು, ಅದಾಗಿಯೂ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಜರುಗಿವುದುದಾಗಿ ಎಚ್ಚರಿಸಲಾಗಿದೆ. ಈ ವಿಡಿಯೊವನ್ನು ವೈರಲ್ ಮಾಡಲು ಕಾರಣರಾದವರನ್ನು ಜಿಲ್ಲಾಡಳಿತ ಗುರುತಿಸಿ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿಕೊಂಡಿದೆ.

 

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    Leave a Reply

    Your email address will not be published. Required fields are marked *

    You cannot copy content of this page