6

BSNL ಗ್ರಾಹಕರಿಗೆ ಮುಖ್ಯ ಸೂಚನೆ..

BSNL ಕಚೇರಿ ವ್ಯವಸ್ಥೆ ಇದೀಗ ಡಿಜಿಟಲೀಕರಣಗೊಂಡಿದ್ದು, ಕಾಗದದ ಅರ್ಜಿ ಭರ್ತಿ ಮಾಡಿ ಮೊಬೈಲ್ ಸಿಮ್ ಪಡೆದ ಎಲ್ಲರೂ ಡಿಜಿಟಲ್ ಮೋಡ್ ಮೂಲಕ ತಮ್ಮ ಗುರುತು ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಪ್ರಕ್ರಿಯೆಗೆ ಯಾವುದೇ ಶುಲ್ಕವಿಲ್ಲ. ಆದರೆ, ಕಚೇರಿ ಓಡಾಟ ಅನಿವಾರ್ಯ!

ಈ ಗುರುತು ಮರು ಪರಿಶೀಲನೆ ಅಸ್ತಿತ್ವದಲ್ಲಿರುವ ಗ್ರಾಹಕರನ್ನು ದೃಢೀಕರಿಸುತ್ತದೆ. ಹೀಗಾಗಿ ಎಲ್ಲಾ BSNL ಗ್ರಾಹಕರು ತಮ್ಮ ಅಧಿಕೃತ ಗುರುತು ಚೀಟಿಯೊಂದಿಗೆ BSNL ಕಚೇರಿ ಅಥವಾ ಪ್ರಾಂಚೈಸಿಗೆ ಭೇಟಿ ನೀಡಬೇಕಿದೆ. ಹೀಗೆ ಹೋಗುವಾಗ ಸಂಬOಧಿಸಿದ ಬಿಎಸ್‌ಎನ್‌ಎಲ್ ಸಿಮ್ ಹೊಂದಿದ ಮೊಬೈಲ್ ತೆಗೆದುಕೊಂಡು ಹೋಗಲು ಮರೆಯಬೇಡಿ!
ಆಧಾರ್ ಕಾರ್ಡ, ವೋಟರ್ ಕಾರ್ಡ ಅಥವಾ ಡ್ರೈವಿಂಗ್ ಲೈಸನ್ಸ ಮೂಲ ಪ್ರತಿಯೊಂದಿಗೆ ಕಚೇರಿಗೆ ಹೋಗಬಹುದು. ಅದನ್ನು ಕಚೇರಿ ಸಿಬ್ಬಂದಿಗೆ ನೀಡಿದ ನಂತರ ಮೊಬೈಲಿಗೆ ಓಟಿಪಿ ಬರಲಿದ್ದು, ನಿಮ್ಮ ಗುರುತು ಬಿಎನ್‌ಎನ್‌ಎಲ್ ತಂತ್ರಾ0ಶದಲ್ಲಿ ದಾಖಲಾಗಲಿದೆ. ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿಕೊಳ್ಳುವುದು ಉತ್ತಮ.

ಉಚಿತ ಸಿಮ್
ಕಾರವಾರದಲ್ಲಿ ಅಸ್ತಿತ್ವದಲ್ಲಿರುವ ಬಿಎಸ್‌ಎನ್‌ಎಲ್ 2g ಹಾಗೂ 3ಜg ಗ್ರಾಹಕರಿಗೆ ಉಚಿತವಾಗಿ 4G ಸಿಮ್ ನೀಡಲಾಗುತ್ತಿದೆ. ಅಗತ್ಯವಿದ್ದವರು ಇದನ್ನು ಪಡೆಯಬಹುದು.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page