6

ರಿಕ್ಷಾವಾಲನಿಗೆ ವಿದೇಶಿ ವ್ಯಾಮೋಹ!

ರಿಕ್ಷಾದ ಮೇಲೆ ವಿದೇಶಿ ಧ್ವಜ ಹಾರಿಸಿಕೊಂಡು ಹೋಗುತ್ತಿದ್ದ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ ಭಟ್ಕಳ ಪೊಲೀಸರು ಆ ರಿಕ್ಷಾ ಮೇಲಿನ ಬಾವುಟ ತೆರವು ಮಾಡಿದ್ದಾರೆ. ಹಲವು ದಿನಗಳಿಂದ ಆತ ವಿದೇಶಿ ಧ್ವಜ ಹಾರಿಸುತ್ತಿದ್ದರೂ ಯಾರೂ ಪ್ರಶ್ನಿಸಿರಲಿಲ್ಲ!

ಭಟ್ಕಳಕ್ಕೆ ಬಂದಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ದೇಶದಲ್ಲಿ ಬೇರೆ ದೇಶದ ಧ್ವಜ ಹಾರಿಸಲು ಯಾರಿಗೂ ಅಧಿಕಾರ ಇಲ್ಲ’ ಎಂದು ಭಾಷಣ ಮಾಡಿದ್ದರು. ಈ ವೇಳೆ ಪತ್ರಕರ್ತರೊಬ್ಬರು `ಭಟ್ಕಳದಲ್ಲಿ ವಿದೇಶಿ ಧ್ವಜ ಹಾರಾಡುತ್ತಿದೆ’ ಎಂದು ಸಾಕ್ಷಿ ಒದಗಿಸಿದ್ದರು. ತಕ್ಷಣ ಪೊಲೀಸರನ್ನು ಕರೆದ ಸಂಸದರು ವಿದೇಶಿ ಧ್ವಜ ಹಾರಿಸಿದವನ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದರು. ಎಲ್ಲಡೆ ಓಡಾಟ ನಡೆಸಿದ ಪೊಲೀಸರು ಆ ರಿಕ್ಷಾದವನನ್ನು ಹಿಡಿದು ಧ್ವಜವನ್ನು ತೆರವು ಮಾಡಿದರು.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page