ಕುಮಟಾ: ಮೂರುರು ಗುಡ್ಡದ ಮೇಲೆ ಗಾಂಜಾ ನಶೆಯಲ್ಲಿದ್ದ ಶರತ್ ನಾಯ್ಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಡ್ಕಣಿಯ ಶರತ್ ಜನಾರ್ಧನ ನಾಯ್ಕ (27) ಸೋಮವಾರ ಸಂಜೆ ಮೂರುರು ಗುಡ್ಡದ ಮೇಲಿನ ರಾಮಕ್ಷತ್ರೀಯ ಸಭಾ ಭವನದ ಬಳಿ ತಿರುಗಾಡುತ್ತಿದ್ದರು. ಪೊಲೀಸ್ ಉಪನಿರೀಕ್ಷಕಿ ಸಾವಿತ್ರಿ ನಾಯ್ಕ ಅವರನ್ನು ಮಾತನಾಡಿಸಿದರು.
ಮಾತನಾಡಲು ತೊದಲುವುದನ್ನು ನೋಡಿ ಅನುಮಾನಗೊಂಡ ಅವರು ಶರತ್ ನಾಯ್ಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಶರತ್ ನಾಯ್ಕ ಗಾಂಜಾ ಸೇವಿಸಿರುವುದು ದೃಢ ಎಂದು ವೈದ್ಯರು ವರದಿ ನೀಡಿದರು. ಈ ಹಿನ್ನಲೆ ಶರತ್ ನಾಯ್ಕ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.