ಶಿರಸಿ: ಗಾಂಧೀನಗರದ ಲಕ್ಷ್ಮೀ ಶಿರಾಲಿ ಅವರು ವಾಸವಾಗಿದ್ದ ಶೆಡ್ಡಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಶೆಡ್ಡಿನ ಜೊತೆ ಕಾರಿಗೂ ಹಾನಿಯಾಗಿದೆ.
ಶಿರಸಿ ಗಾಂಧೀನಗರದ ರಂಜತ್ ಬಾಲಚಂದ್ರ ಹೆಗಡೆ (25) ಶಾಂತಿನಗರದ ವಿಶಾಲ ನಾಯ್ಕ ಹಾಗೂ ಅನಘಾ ಹೆಗಡೆ ಎಂಬಾತರನ್ನು ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಗಾಂಧೀನಗರದ ಬಳಿ ಅವರು ಕಾರಿನ ವೇಗ ಹೆಚ್ಚಿಸಿದ್ದು, 1ನೇ ಮುಖ್ಯರಸ್ತೆಯಲ್ಲಿದ್ದ ಲಕ್ಷ್ಮೀ ನಾರಾಯಣ ಶಿರಾಲಿ ಅವರ ಶೆಡ್ಡಿಗೆ ತಮ್ಮ ಕಾರು ಗುದ್ದಿದರು.
ಅಪಘಾತದ ರಭಸಕ್ಕೆ ಶೆಡ್ಡು ಜಖಂ ಆಗಿದ್ದು, ಕಾರಿಗೂ ಹಾನಿಯಾಗಿದೆ. ಜೊತೆಗೆ ಕಾರಿನಲ್ಲಿದ್ದ ಮನೆಯ ಶೆಡ್ಡು ಜಖಂ ವಿಶಾಲ ನಾಯ್ಕ ಹಾಗೂ ಅನಘಾ ಹೆಗಡೆ ಸಹ ಗಾಯಗೊಂಡರು. ಕಾರು ಓಡಿಸುತ್ತಿದ್ದ ರಂಜತ್ ಹೆಗಡೆ ಸಹ ಪೆಟ್ಟು ಮಾಡಿಕೊಂಡರು. ಶೆಡ್ಡು ಜಖಂ ಆದ ಕಾರಣ ಕಾರು ಚಾಲಕನ ವಿರುದ್ಧ ಲಕ್ಷ್ಮೀ ಅವರು ಪೊಲೀಸ್ ದೂರು ನೀಡಿದ್ದಾರೆ.