ಯಲ್ಲಾಪುರದ ಗಂಟೆ ಘಣಪತಿ ದೇವಾಲಯದಲ್ಲಿ ಮಧ್ಯಾಹ್ನದ ಪ್ರಸಾದ ಭೋಜನ ಶುರುವಾಗಿದೆ. ಏಪ್ರಿಲ್ 21ರಿಂದ ನಿತ್ಯವೂ ಊಟ ಹಾಕುವುದಾಗಿ ದೇಗುಲ ಸಮಿತಿ ಹೇಳಿಕೊಂಡಿದ್ದರೂ, ಒಳ್ಳೆಯ ಕಾರ್ಯಕ್ಕೆ ಅದಕ್ಕಿಂತಲೂ ಮುಂಚಿತವಾಗಿ ಮುಹೂರ್ತ ಕೂಡಿಬಂದಿದೆ. ಮಂಗಳವಾರದಿoದಲೇ ಅನ್ನದಾನ ಸೇವೆ ಶುರು ಮಾಡಲಾಗಿದೆ.
ಮೊದಲ ದಿನ 150ಕ್ಕೂ ಅಧಿಕ ಭಕ್ತರು ಇಲ್ಲಿ ಊಟ ಮಾಡಿದರು. ಅನ್ನ-ಸಾರು-ತಂಬಳಿಯ ಜೊತೆ ಸಿಹಿಖಾದ್ಯವಾಗಿ ಪಾಯಸವನ್ನು ಈ ದಿನ ಉಣಬಡಿಸಲಾಯಿತು. ಬುಧವಾರದಿಂದ ಹವ್ಯಕ ಸಂಪದಾಯದ ಸಾಂಪ್ರದಾಯಿಕ ತಂಬಳಿ ಊಟ ನೀಡಲು ಇಲ್ಲಿ ನಿರ್ಧರಿಸಲಾಗಿದೆ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಉಪ್ಪು, ಉಪ್ಪಿನಕಾಯಿಯ ಜೊತೆ ಅನ್ನ-ಸಾರು ಹಾಗೂ ತಂಬಳಿ ಊಟ ಇಲ್ಲಿ ಸಿಗಲಿದೆ.
ಇನ್ನೂ ನಿತ್ಯ ಮಧ್ಯಾಹ್ನ 12.30ರಿಂದ 2.30ರವರೆಗೆ ಪ್ರಸಾದ ಭೋಜನ ವಿತರಣೆ ಆಗಲಿದೆ. ಸ್ವಯಂ ಸೇವಾ ಪದ್ಧತಿ ಮೂಲಕ ಅನ್ನದಾನ ನಡೆಯಲಿದೆ. ಊಟಕ್ಕೆ ಹಾಜರಿರುವ ಭಕ್ತರು 12 ಗಂಟೆಯೊಳಗೆ ದೇವಸ್ಥಾನ ಕಾರ್ಯಾಲಯದಲ್ಲಿ ಟೋಕನ್ ಪಡೆಯುವಂತೆ ಆಡಳಿತ ಮಂಡಳಿ ವಿನಂತಿಸಿದೆ.
ಯಲ್ಲಾಪುರದ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ನೂತನ ಪ್ರತಿಷ್ಠಾ ಮಹೋತ್ಸವದ ನಂತರ ಅನೇಕ ಭಕ್ತರ ಬೇಡಿಕೆ ಮತ್ತು ಆಡಳಿತ ಮಂಡಳಿಯ ನಿರ್ಣಯದಂತೆ ಮಂಗಳವಾರದಿoದ ಮಧ್ಯಾಹ್ನದ ಅನ್ನಪ್ರಸಾದ ಭೋಜನ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.