`ಬಡವರ ಪರ ಎಂದು ಸಾರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ 2005ರ ಪೂರ್ವದಿಂದಲೂ ಅರಣ್ಯ ಭೂಮಿಯಲ್ಲಿರುವ ಬಗರ ಹುಕುಂ ಸಾಗುವಳಿದಾರರ ಹಿತ ಕಾಪಾಡಲು ಈ ತಿಂಗಳ ಅಂತ್ಯದೊಳಗೆ ಸುಪ್ರೀಂ ಕೋರ್ಟಿಗೆ ಅಫಿಡಾವಿಟ್ ಸಲ್ಲಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಆಗ್ರಹಿಸಿದ್ದಾರೆ.
`ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡವರ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟಿಗೆ ಈ ತಿಂಗಳ ಅವಧಿಯಲ್ಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಅಫಿಡಾವಿಟ್ ಸಲ್ಲಿಸಿ ಮದ್ಯಪ್ರವೇಶ ಮಾಡಬೇಕು’ ಎಂದವರು ಒತ್ತಾಯಿಸಿದ್ದಾರೆ. `ಈ ದಿಶೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ಜಿಲ್ಲೆಯ ಲಕ್ಷಾಂತರ ಬಡ ಅರಣ್ಯ ಭೂಮಿ ಸಾಗುವಳಿದಾರರ ಬದುಕು ಬೀದಿಗೇ ಬರುವ ಅಪಾಯವಿದೆ’ ಎಂದು ಅವರು ಆತಂಕವ್ಯಕ್ತಪಡಿಸಿದ್ದಾರೆ.
`ಅರಣ್ಯ ಹಕ್ಕು ಕ್ಲೇಮು ತಿರಸ್ಕರಿಸಲ್ಪಟ್ಟ ಅರ್ಜಿದಾರರ ಒತ್ತುವರಿ ತೆರವುಗೊಳಿಸಲು ಕೆಲವು ಸಂಘಟನೆಯವರು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯ ಭೂಮಿ ಸಾಗುವಳಿದಾರರ ಪರವಾಗಿ ಅಫೀಡವಿಟ್ ಸಲ್ಲಿಸುವ ತುರ್ತು ಅಗತ್ಯವಿದೆ. ಜಿಲ್ಲೆಯಲ್ಲಿ ವಸತಿ ಮತ್ತು ಜೀವನೋಪಾಯಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಆ ಪೈಕಿ 75000ಕ್ಕೂ ಹೆಚ್ಚು ಕುಟುಂಬಗಳು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿವೆ’ ಎಂದವರು ವಿವರಿಸಿದ್ದಾರೆ.
`1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜ್ಯಾರಿಗೆ ಬಂದ ನಂತರ 1978ರ ಪೂರ್ವದ ಒತ್ತುವರಿಗಳನ್ನು ಸಕ್ರಮ ಪಡಿಸಲು ಕೇಂದ್ರ ಸರ್ಕಾರ ಶರತ್ತು ಬಧ್ಧ ಅನುಮೋದನೆ ನೀಡಿತ್ತು. ಆದರೆ, ಆಗ ನಡೆದ ಸಕ್ರಮ ಪ್ರಕ್ರಿಯೆಗಳು ಪಾರದರ್ಶಕವಾಗಿರಲಿಲ್ಲ. ಇದರಿಂದ ಸಾವಿರಾರು ಅರ್ಹ ಪ್ರಕರಣಗಳು ಬಿಟ್ಟು ಹೋದವು. ಈ ಬಗ್ಗೆ ರಾಜ್ಯ ಸರ್ಕಾರದ ನಡವಳಿಯಲ್ಲಿಯೇ ಉಲ್ಲೇಖಗಳಿವೆ’ ಎಂಬುದನ್ನು ಚಂದ್ರಕಾoತ ಕೋಚ್ರೆಕರ್ ಅವರು ನೆನಪು ಮಾಡಿಕೊಟ್ಟಿದ್ದಾರೆ.
`ಬಿಟ್ಟು ಹೋಗಿರುವ ಅರ್ಹ ಪ್ರಕರಣಗಳನ್ನು ಪುನರ್ ಪರಿಶೀಲಿಸಿ ಮಂಜೂರಿಗೆ ಶಿಫಾರಸು ಮಾಡಲು ಅಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ಸರ್ಕಾರದ ಆದೇಶ ಈ ವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಇಂಥ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡಿದ್ದು, ಪಾರಂಪರಿಕ ಅರಣ್ಯವಾಸಿ ವ್ಯಾಖ್ಯೆಯ ಬಗೆಗಿನ ಗೊಂದಲದಿAದ ಬಡವರ ಅರ್ಜಿ ಮೂಲೆಗುಂಪಾಗಿದೆ’ ಎಂದವರು ವಿವರಿಸಿದ್ದಾರೆ.