ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಹಾಗೂ ಜಲ್ಲಿಕಲ್ಲು ತುಂಬಿದ ಲಾರಿಯು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಎರಡು ವಾಹನ ಚಾಲಕರು ಲಾರಿಯಲ್ಲಿ ಸಿಕ್ಕಿಬಿದ್ದು ಗಾಯಗೊಂಡರು.
ಅಂಕೋಲಾ – ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಎಥನೋಲ್ ತುಂಬಿದ ಟ್ಯಾಂಕರ್ ಇಳಿಜಾರಿನಲ್ಲಿ ವೇಗವಾಗಿ ಚಲಿಸಿತು. ಎದುರಿನಿಂದ ಬರುತ್ತಿದ್ದ ಜಲ್ಲಿಕಲ್ಲು ತುಂಬಿದ ಲಾರಿಗೆ ಟ್ಯಾಂಕರ್ ಗುದ್ದಿತು. ಪರಿಣಾಮ ಎರಡೂ ವಾಹನ ಜಖಂ ಆಯಿತು. ಈ ಅಪಘಾತದಿಂದ ಎರಡೂ ವಾಹನದ ಚಾಲಕರು ವಾಹನಗಳಲ್ಲಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡರು. ತುರ್ತು ಚಿಕಿತ್ಸೆ ಲಭಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾದರು.
ಅಗ್ನಿಶಾಮಕದಳದ ಸಿಬ್ಬಂದಿ ಲಾರಿಯಲ್ಲಿ ಸಿಲುಕಿದ್ದ ಚಾಲಕರನ್ನು ರಕ್ಷಿಸಿದರು. ಅಗ್ನಿಶಾಮಕದಳದ ಸುಧೀರ್ ಕಿಂದಳ್ಕರ್, ಪ್ರಣಯ ಕೋಚರೆಕರ್, ನಾಗರಾಜ ನಾಯಕ್, ಅಮಿತ ಗುನಗಿ, ಸಲೀಮ್ ನದಾಫ್, ಚೇತನ್ ಶರ್ಮ ಕೆ ಎಸ್ ಕಾರ್ಯಚರಣೆಯಲ್ಲಿದ್ದರು.