ಶಿರಸಿ: ಬಿಸಲಕೊಪ್ಪ ಗ್ರಾ ಪಂ ವ್ಯಾಪ್ತಿಯ ಆನಗೋಡಕೊಪ್ಪ ಬಳಿಯಿರುವ ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದಾಟಿ ಶಾಲೆಗೆ ಬರಲು ಮಕ್ಕಳು ಹೆದರುತ್ತಿದ್ದಾರೆ. ಹೀಗಾಗಿ ಉತ್ತಮ ಸೇತುವೆ ನಿರ್ಮಿಸುವಂತೆ ಆ ಭಾಗದ ಜನ ಆಗ್ರಹಿಸಿದ್ದಾರೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯವರು ಸಹ ಸ್ಥಳ ಪರಿಶೀಲನೆ ನಡೆಸಿದ್ದರು. ಸೇತುವೆಯ ಅಳತೆಯನ್ನು ಪಡೆದಿದ್ದರು. ಆದರೆ, ಯಾವುದೇ ಕ್ರಮ ಆಗಿಲ್ಲ ಎಂಬುದು ಜನರ ದೂರು. ಪ್ರಸ್ತುತ ಸ್ಥಳೀಯ ಗ್ರಾ ಪಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ತಹಶೀಲ್ದಾರ್ ಕಚೇರಿಯ ಗಮನಕ್ಕೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಈ ಸೇತುವೆ ಮಾರ್ಗ ಹೊರತುಪಡಿಸಿಯೂ ಶಾಲೆಗೆ ಬರಲು ಇನ್ನೊಂದು ದಾರಿಯಿದೆ. ಅದು 4ಕಿಮೀ ದೂರ!