ಯಲ್ಲಾಪುರ: ರಾಜ್ಯಶಾಸ್ತ್ರವಿಭಾಗದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ 7 ಚಿನ್ನದ ಪದಕ ಗೆದ್ದ ಮಯೂರ್ ಖಿಲಾರಿಗೆ ಕಿರವತ್ತಿ ಭಾಗದ ನೂರಾರು ಜನ ಸನ್ಮಾನಿಸಿದರು. ಮಯೂರ ಅವರ ಸಾಧನೆ ನೋಡಿ ಕೂಲಿ ನೋಡಿ ಬದುಕು ಕಟ್ಟಿಕೊಂಡಿದ್ದ ಅವರ ಪಾಲಕರು ಸಾರ್ಥಕ ಭಾವನೆ ವ್ಯಕ್ತಪಡಿಸಿದರು.
ಹೊಸಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಯೂರ್ ಆಗಮಿಸುತ್ತಿದ್ದಂತೆ ಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿ ಗದ್ದೆಮನೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಆನಂದ ಶೆಟ್ಟಿ, ಪ್ರಮುಖರಾದ ನಾಗರಾಜ್ ಕದಂ, ವಿಠ್ಠು ಡೋಯಿಪೊಡೆ, ರಾಮಚಂದ್ರ ಖಿಲಾರಿ, ಬಾಬು ಜಾನಕರ, ಬಲರಾಮ್ ಕಾಂಬಳೆ, ಪ್ರಕಾಶ ಮಿಂಡೊಳ್ಳಿ, ದೀಲಿಪ್ ಕಾಂಬಳೆ, ಮಲ್ಲೇಶ ಖಿಲಾರಿ ಆಗಮಿಸಿ ಶಾಲು ಹೊದೆಸಿದರು. ಕಿರವತ್ತಿ ಉಪವಲಯ ಅರಣ್ಯಧಿಕಾರಿ ಪ್ರಕಾಶ ಕರಿಗಾರ ಈ ವೇಳೆ ಗೌರವಿಸಿ ಮಾತನಾಡಿ `ಮೂಲಭೂತ ಸೌಕರ್ಯ ಇಲ್ಲದಿದ್ದರೂ ಸಾಧನೆ ಮಾಡಿದ ಮಯೂರ ಎಲ್ಲರಿಗೂ ಮಾದರಿ’ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ಭೀಮಸಿ ಓಬ್ಬಣ್ಣವರ ಮಾತನಾಡಿ `ಮಯೂರನ ಸಾಧನೆಯಿಂದ ಊರಿನ ಕೀರ್ತಿ ಹೆಚ್ಚಾಗಿದೆ’ ಎಂದರು. ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಮಾತನಾಡಿ `ವಿದ್ಯಾರ್ಥಿ ಜೀವನದಲ್ಲಿಯೇ ಸಾಧನೆ ಬಗ್ಗೆ ಕನಸು ಕಂಡಾಗ ಬದುಕು ಕಟ್ಟಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಮಯೂರ್ ಸಾಧನೆ ಮಾಡಿದ್ದು ಎಲ್ಲರಿಗೂ ಪ್ರೇರಣೆ’ ಎಂದರು.
ಪ್ರಮುಖರಾದ ಪ್ರೇಮಕುಮಾರ ದೇಸಾಯಿ, ಅಪ್ಪಯ್ಯ ಬಚನಟ್ಟಿ, ನಾನಾಜಿ ದೇಸಾಯಿ, ಚಂದ್ರಕಾAತ್ ಪಾಟೀಲ್, ವಿಜಯ ಕಾಂಬಳೆ, ಮಲ್ಲೇಶ ಶಿಂದೆ, ವಿಠ್ಠಲ ಮಲಗುಂಡೆ, ಮುಬಾರಕ್ ಶೇಖ್, ಪ್ರಕಾಶ ಕಾಂಬಳೆ, ನಾಗರಾಜ ಚಿಕ್ಕಬಸವಣ್ಣನವರ, ಭೈರವ್ ಕಾತ್ರೋಟ್, ಬಾಗು ಕೊಳಾಪಟೆ, ರಮೇಶ ಲಗಮಾ ನಾಯಕ್, ಗಂಗಾಧರ ವಾಲಿಕಾರ್, ಸಂಜು ದಂಡಾಪುರ, ಮಾರುತಿ ಜಾಧವ, ಮಂಜುನಾಥ ಕಾಂಬಳೆ, ರಾಜು ಕಾಂಬಳೆ, ಸಂತೋಷ ಬನ್ನೇಣ್ಣವರ, ಸಿದ್ದಪ್ಪ ಕಾಂಬಳೆ, ಮಂಜುನಾಥ ಮುತ್ತನ್ನವರ, ಅಜಯ ಕಾಂಬಳೆ, ರುಸ್ತಂ ಶೇಖ, ಪರಶುರಾಮ ಕಪಾಲಿ, ಯಲ್ಲಪ್ಪ ಖಿಲಾರಿ, ರಾಜು ಶೆಟ್ಟಿ, ಬಸವರಾಜ ಕೊರವರ, ಮಾರುತಿ ಖಾನಪ್ಪನವರ, ರೂಪಾ ಶೆಟ್ಟಿ, ರತ್ನವ್ವಾ ವಾಲಿಕಾರ, ಮಲ್ಲವ್ವಾ ಮಿಂಡೋಳ್ಳಿ ಮಯೂರರನ್ನು ಭೇಟಿ ಮಾಡಿ ಶುಭ ಕೋರಿದರು.